alex Certify ಜನತಾ ದರ್ಶನ : ಶಿವಮೊಗ್ಗ ಜಿಲ್ಲೆಯಲ್ಲಿ 328 ಅರ್ಜಿ ಸ್ವೀಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನತಾ ದರ್ಶನ : ಶಿವಮೊಗ್ಗ ಜಿಲ್ಲೆಯಲ್ಲಿ 328 ಅರ್ಜಿ ಸ್ವೀಕಾರ

ಶಿವಮೊಗ್ಗ : ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ  ಅಧ್ಯಕ್ಷತೆಯಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 328 ಅಹವಾಲುಗಳನ್ನು ಜನರಿಂದ ಸ್ವೀಕರಿಸಲಾಗಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅತ್ಯಧಿಕ 126 ಅಹವಾಲು ಸ್ವೀಕರಿಸಲಾಗಿದೆ. ನಂತರ ಸ್ಥಾನದಲ್ಲಿ ಜಿಲ್ಲಾ ಪಂಚಾಯತ್ಗೆ ಸಂಬಂಧಿಸಿದಂತೆ 38 ಅರ್ಜಿಗಳು ಬಂದಿವೆ. ಕಾರ್ಮಿಕ ಇಲಾಖೆಗೆ 02, ಸ್ಮಾರ್ಟ್ಸಿಟಿಗೆ 02, ಅಬಕಾರಿ ಇಲಾಖೆಗೆ 03, ಸಮಾಜ ಕಲ್ಯಾಣ ಇಲಾಖೆಗೆ 03, ಪಶುಪಾಲನಾ ಇಲಾಖೆಗೆ 03, ಕೆಎಸ್ಆರ್ಟಿಸಿಗೆ 08, ಆಹಾರ ಇಲಾಖೆಗೆ 08, ಮೆಸ್ಕಾಂ ಗೆ 10, ಪೊಲೀಸ್ ಇಲಾಖೆಗೆ 11, ಆರೋಗ್ಯ ಇಲಾಖೆಗೆ 14, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಸಂಬಂಧಿಸಿದ 19, ಮಹಾನಗರಪಾಲಿಕೆಗೆ 26, ಪ್ರೌಢಶಿಕ್ಷಣ ಇಲಾಖೆಗೆ 26, ಇತರೆ ಇಲಾಖೆಗಳಿಗೆ ಸಂಬಂಧಿಸಿದ 29 ಸೇರಿದಂತೆ ಒಟ್ಟು 328 ಅಹವಾಲು ಸ್ವೀಕರಿಸಲಾಗಿದ್ದು, ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...