alex Certify Big News: 149 ವರ್ಷಗಳ ಪದ್ದತಿಗೆ ಜಮ್ಮು & ಕಾಶ್ಮೀರ ಸರ್ಕಾರದಿಂದ ತಿಲಾಂಜಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: 149 ವರ್ಷಗಳ ಪದ್ದತಿಗೆ ಜಮ್ಮು & ಕಾಶ್ಮೀರ ಸರ್ಕಾರದಿಂದ ತಿಲಾಂಜಲಿ

ಅವಳಿ ರಾಜಧಾನಿಗಳಾದ ಶ್ರೀನಗರ ಹಾಗೂ ಜಮ್ಮು ನಡುವೆ ಆಡಳಿತ ಕೇಂದ್ರವನ್ನು ಸ್ಥಳಾಂತರ ಮಾಡುವ 149 ವರ್ಷಗಳ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟ ಜಮ್ಮು & ಕಾಶ್ಮೀರ ಸರ್ಕಾರ, ಎರಡೂ ನಗರಗಳ ನಡುವೆ ಸರ್ಕಾರೀ ನೌಕರರ ನಿರಂತರ ಸ್ಥಳಾಂತರದ ತಲೆನೋವಿಗೆ ಬ್ರೇಕ್ ಹಾಕಿದೆ.

ಕೇಂದ್ರಾಡಳಿತ ಪ್ರದೇಶದ ಆಡಳಿತವು ಇ-ಕಚೇರಿಯಿಂದಲೇ ಬಹುತೇಕ ನಡೆಯುವ ಕಾರಣ ಆರು ತಿಂಗಳಿಗೊಮ್ಮೆ ಮಾಡುವ ರಾಜಧಾನಿ ಸ್ಥಳಾಂತರದ ಈ ಕೆಲಸ ಮಾಡಬೇಕಾದ ಅಗತ್ಯವಿಲ್ಲ ಎಂದು ರಾಜ್ಯಪಾಲ ಮನೋಜ್ ಸಿನ್ಹಾ ಘೋಷಿಸಿದ್ದಾರೆ.

ಈ ’ದರ್ಬಾರ್‌ ಚಾಲನೆ’ಯ ಪ್ರಕ್ರಿಯೆಯ ಅಂಗವಾಗಿ ಅವಳಿ ರಾಜಧಾನಿಗಳಲ್ಲಿ ವಾಸ್ತವ್ಯಕ್ಕೆಂದು ನೀಡಲಾಗಿದ್ದ ಜಾಗಗಳನ್ನು ಮೂರು ವಾರಗಳ ಒಳಗೆ ಖಾಲಿ ಮಾಡಲು ನಿರ್ದೇಶನ ನೀಡಲಾಗಿದೆ. ಈ ನಡೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 200 ಕೋಟಿ ರೂಪಾಯಿಗಳ ಉಳಿತಾಯವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...