alex Certify BIG BREAKING: ಜೈಪುರದಲ್ಲೂ ಒಮಿಕ್ರಾನ್ ಸ್ಪೋಟ, ದೇಶದಲ್ಲಿ 21 ಕ್ಕೆ ಏರಿದ ಸೋಂಕಿತರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಜೈಪುರದಲ್ಲೂ ಒಮಿಕ್ರಾನ್ ಸ್ಪೋಟ, ದೇಶದಲ್ಲಿ 21 ಕ್ಕೆ ಏರಿದ ಸೋಂಕಿತರ ಸಂಖ್ಯೆ

ನವದೆಹಲಿ: ಮಹಾರಾಷ್ಟ್ರ ರಾಜಧಾನಿ ಮುಂಬೈ ಬಳಿಕ ಜೈಪುರದಲ್ಲಿ ಒಮಿಕ್ರಾನ್ ಸ್ಫೋಟಗೊಂಡಿದೆ. ಮುಂಬೈನಲ್ಲಿ ಇವತ್ತು ಒಂದೇ ದಿನ 7 ಜನರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.

ಜೈಪುರದಲ್ಲಿ ಇವತ್ತು ಒಂದೇ ದಿನ 9 ಕೇಸ್ ಗಳು ಪತ್ತೆಯಾಗಿವೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸಂಖ್ಯೆ 21 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕೊರೋನಾ ಹೊಸ ರೂಪಾಂತರ ಒಮಿಕ್ರಾನ್ ನ ಮೊದಲ ಎರಡು ಪ್ರಕರಣಗಳು ಕರ್ನಾಟಕದಲ್ಲಿ ಗುರುವಾರ ವರದಿಯಾಗಿದೆ. ಶನಿವಾರ ಗುಜರಾತ್‌ನ ಜಾಮ್‌ನಗರ ಮತ್ತು ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಸೋಂಕಿನ ಮೂರನೇ ಮತ್ತು ನಾಲ್ಕನೇ ಪ್ರಕರಣ ವರದಿಯಾಗಿದೆ. ದೆಹಲಿಯು ತನ್ನ ಹೊಸ COVID-19 ರೂಪಾಂತರದ ಓಮಿಕ್ರಾನ್‌ನ ಮೊದಲ ಪ್ರಕರಣವನ್ನು ಭಾನುವಾರ ವರದಿ ಮಾಡಿದೆ. ಸಂಜೆ ವೇಳೆಗೆ ಮುಂಬೈನಲ್ಲಿ 7 ಹಾಗೂ ಜೈಪುರದಲ್ಲಿ 9 ಪ್ರಕರಣ ವರದಿಯಾಗಿವೆ.

COVID-19 ನ ಹೊಸ ರೂಪಾಂತರವು ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ (WHO) ಮೊದಲ ಬಾರಿಗೆ ವರದಿಯಾಗಿದೆ. WHO ಪ್ರಕಾರ, ಈ ವರ್ಷ ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ ಮೊದಲ ಬಾರಿಗೆ ದೃಢಪಡಿಸಿದ B.1.1.529 ಸೋಂಕು ಇದಾಗಿದ್ದು, ನವೆಂಬರ್ 26 ರಂದು, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ COVID-19 ರೂಪಾಂತರ B.1.1.529 ಅನ್ನು WHO ‘ಓಮಿಕ್ರಾನ್’ ಎಂದು ಹೆಸರಿಸಿದೆ. WHO ಒಮಿಕ್ರಾನ್ ಅನ್ನು ‘variant of concern'(ಕಳವಳಿಕೆಯ ರೂಪಾಂತರ) ಎಂದು ವರ್ಗೀಕರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...