ಜೈಪುರ್: ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶ ಪಾವತಿಸಲು ವಿಫಲನಾದ ಪತಿಗೆ ಒಂದು ಹಾಗೂ ಎರಡು ರೂಪಾಯಿ ನಾಣ್ಯಗಳಲ್ಲಿ 55 ಸಾವಿರ ರೂ. ಪಾವತಿಸಲು ಜೈಪುರ ಕೋರ್ಟ್ ಅನುಮತಿ ನೀಡಿದೆ.
ಮಾಸಿಕ 5,000 ರೂ.ನಂತೆ 11 ತಿಂಗಳಿನಿಂದ ಪತ್ನಿಗೆ ಜೀವನಾಂಶ ನೀಡಲು ಪತಿ ವಿಫಲನಾಗಿದ್ದ. ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಆತನ ಕುಟುಂಬದವರು 11 ಗೋಣಿ ಚೀಲಗಳಲ್ಲಿ 55,000 ರೂ. ನಾಣ್ಯಗಳನ್ನು ತುಂಬಿಕೊಂಡು ಕೋರ್ಟ್ ಗೆ ತಂದಿದ್ದಾರೆ.
ಅವರ ಮನವಿಯ ಮೇರೆಗೆ ನಾಣ್ಯಗಳನ್ನು ಆತನ ವಿಚ್ಛೇದಿತ ಪತ್ನಿಗೆ ನೀಡಲು ಕೋರ್ಟ್ ಅನುಮತಿಸಿದೆ. ಆದರೆ, ಇದಕ್ಕೆ ವಿಚ್ಛೇದಿತ ಪತ್ನಿಯ ಪರ ವಕೀಲರು ಆಕ್ಷೇಪಿಸಿ ಇದು ಮಾನಸಿಕ ಹಿಂಸೆ ಆಗಿದೆ ಎಂದು ದೂರಿದ್ದಾರೆ. ಆಗ ನ್ಯಾಯಾಲಯ ನಾಣ್ಯಗಳನ್ನು ತಲಾ ಒಂದು ಸಾವಿರ ರೂಪಾಯಿಗಳಂತೆ ಪಾಕೆಟ್ ಮಾಡಿ ನೀಡುವಂತೆ ಸೂಚನೆ ನೀಡಿದೆ.