
ಉಡುಪಿ: ಪ್ರಾಣಿ ಹಿಂಸೆ ಇರುವ ಕಂಬಳಕ್ಕೆ ಜೈನ ಸಮುದಾಯ ಬೆಂಬಲ ನೀಡಬಾರದು ಎಂದು ಜೈನ ಸ್ವಾಮೀಜಿ ಹೇಳಿದ್ದಾರೆ.
ಕಾರ್ಕಳ ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ 108 ಮುನಿಶ್ರೀ ಅಮೋಘ ಕೀರ್ತಿ ಮಹಾರಾಜ್ ಅವರು, ಅಹಿಂಸೆ, ಕರುಣೆ ಬಗ್ಗೆ ಪ್ರತಿಪಾದಿಸುವ ಜೈನ ಸಮುದಾಯ ಪ್ರಾಣಿ, ಪಕ್ಷಿಗಳಿಗೆ ಹಿಂಸೆ ನೀಡುವುದನ್ನು ಬೆಂಬಲಿಸಬಾರದು. ಈ ಹಿನ್ನೆಲೆಯಲ್ಲಿ ಜೈನ ಸಮುದಾಯ ಕಂಬಳಕ್ಕೆ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ.
ಕಂಬಳ ಕಂಡರೆ ನಮಗೆ ದುಃಖವಾಗುತ್ತದೆ. ಜೈನರು ಕಂಬಳದಲ್ಲಿ ಭಾಗವಹಿಸಬಾರದು. ಕಂಬಳ ಬೆಂಬಲಿಸುವವರು ಪಾರ್ಶ್ವನಾಥ, ಮಹಾವೀರ, ಜೈನ ಧರ್ಮದ ಅನುಯಾಯಿಗಳು ಆಗಲಾರರು. ಬದುಕಲು ಬಿಡಿ ಎನ್ನುವುದನ್ನು ಜೈನ ಧರ್ಮ ಸಾರುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ.