alex Certify ಹಳೆ ದ್ವೇಷದಿಂದ ಅಶ್ಲೀಲ ಪೋಸ್ಟ್: ಮಹಿಳೆಗೆ ಜೈಲು ಶಿಕ್ಷೆ, ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ದ್ವೇಷದಿಂದ ಅಶ್ಲೀಲ ಪೋಸ್ಟ್: ಮಹಿಳೆಗೆ ಜೈಲು ಶಿಕ್ಷೆ, ದಂಡ

ಶಿವಮೊಗ್ಗ: ಹಳೆ ದ್ವೇಷದಿಂದ ಬಾಲಕಿ ಮತ್ತು ಆಕೆಯ ಕುಟುಂಬದವರ ಫೋಟೋ ಮೇಲೆ ಅಶ್ಲೀಲ ಪದಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಶಿವಮೊಗ್ಗದ ಪೋಕ್ಸೋ ನ್ಯಾಯಾಲಯ ಮಹಿಳೆಗೆ 10 ತಿಂಗಳ ಸಾದಾ ಶಿಕ್ಷೆ, 60 ಸಾವಿರ ರೂಪಾಯಿ ದಂಡ ವಿಧಿಸಿ ಶುಕ್ರವಾರ ಆದೇಶಿಸಿದೆ. ಭದ್ರಾವತಿ ತಾಲೂಕಿನ 30 ವರ್ಷದ ಮಹಿಳೆ ಕಳೆದ ವರ್ಷ ಬಾಲಕಿ ಮತ್ತು ಆಕೆಯ ಕುಟುಂಬ ಸದಸ್ಯರ ಮೇಲೆ ಅಶ್ಲೀಲ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

ಭದ್ರಾವತಿ ಹೊಸ ಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಸಿಪಿಐ ರಾಘವೇಂದ್ರ ಕಾಂಡಿಕೆ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮಹಿಳೆಗೆ 10 ತಿಂಗಳ ಸಾದಾ ಶಿಕ್ಷೆ, 60,000 ರೂ. ದಂಡ ವಿಧಿಸಿ ಆದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...