
ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಮಾರಕಾಸ್ತ್ರ’ ಚಿತ್ರದ ‘ಜೈ ಹನುಮಾನ್’ ಎಂಬ ಲಿರಿಕಲ್ ಸಾಂಗ್ ಒಂದನ್ನು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಹಾಡು ಕೆಲವೇ ಕ್ಷಣಗಳಲ್ಲಿ ಭರ್ಜರಿ ವೀಕ್ಷಣೆ ಪಡೆದಿದ್ದು, ಆಂಜನೇಯನ ಭಕ್ತರಿಂದ ಕಮೆಂಟ್ಸ್ ಗಳ ಸುರಿಮಳೆ ಬಂದಿವೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಮಂಜು ಕವಿ ಸಂಗೀತ ಸಂಯೋಜನೆ ನೀಡುವ ಮೂಲಕ ಸಾಹಿತ್ಯ ಬರೆದಿದ್ದಾರೆ.
ಗುರುಮೂರ್ತಿ ಸುನಾಮಿ ನಿರ್ದೇಶನದ ಈ ಚಿತ್ರದಲ್ಲಿ ಮಾಲಾಶ್ರೀ, ಅಯ್ಯಪ್ಪ, ಹರ್ಷಿಕಾ ಪೂಣಚ್ಚ, ಆನಂದ್ ಆರ್ಯ ಪ್ರಮುಖ ಪಾತ್ರದಲ್ಲಿದ್ದು, ಶ್ರಾವ್ಯ ಕಂಬೈನ್ಸ್ ಬ್ಯಾನರ್ ನಡಿ ಕೋಮಲ ನಟರಾಜ ಬಂಡವಾಳ ಹೂಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣವಿದ್ದು, ವಿಶ್ವ ಸಂಕಲನವಿದೆ.