alex Certify ಮಾರ್ಕೆಟ್​ ಬೇಗ ʼಬಂದ್ʼ​ ಮಾಡಿದ್ರೆ ಮಕ್ಕಳಾಗಲ್ಲ: ಪಾಕ್​ ರಕ್ಷಣಾ ಸಚಿವರ ವಿಲಕ್ಷಣ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಕೆಟ್​ ಬೇಗ ʼಬಂದ್ʼ​ ಮಾಡಿದ್ರೆ ಮಕ್ಕಳಾಗಲ್ಲ: ಪಾಕ್​ ರಕ್ಷಣಾ ಸಚಿವರ ವಿಲಕ್ಷಣ ಸಲಹೆ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ.

ಈ ವಿಡಿಯೋವನ್ನು ಪತ್ರಕರ್ತೆ ನೈಲಾ ಇನಾಯತ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಅಷ್ಟಕ್ಕೂ ರಕ್ಷಣಾ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ವಿಚಿತ್ರವಾದ ಸಿದ್ಧಾಂತವನ್ನು ಉಲ್ಲೇಖಿಸಿದ್ದು, ನಗುವಿಗೆ ಕಾರಣವಾಗಿದೆ.

ವಿಡಿಯೋದಲ್ಲಿ ಖವಾಜಾ ಆಸಿಫ್ ಹೇಳಿದ್ದೇನೆಂದರೆ, “ರಾತ್ರಿ 8 ಗಂಟೆಗೆ ಮಾರುಕಟ್ಟೆಗಳು ಮುಚ್ಚಲ್ಪಟ್ಟ ಸ್ಥಳಗಳಲ್ಲಿ, ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗಿದೆ” ಎಂದಿದ್ದಾರೆ. ಇದು ಜನರನ್ನು ವಿಚಿತ್ರಕ್ಕೆ ತಳ್ಳಿದೆ. ಅಂದರೆ ಸಚಿವರು ರಾತ್ರಿ 8 ಗಂಟೆಯ ನಂತರ ಶಿಶುಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆಯೇ ಎಂದು ಜನರು ಪ್ರಶ್ನಿಸುತ್ತಿದ್ದು, ಇಂಥ ವಿಚಿತ್ರ ಎಲ್ಲಿಯೂ ಕೇಳಲಿಲ್ಲ ಎನ್ನುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...