ಟ್ವಿಟರ್ ಸಿಇಒ ಮತ್ತು ಕೋಟ್ಯಾಧಿಪತಿ ಜ್ಯಾಕ್ ಡಾರ್ಸೆ ತಮ್ಮ ಟ್ವೀಟ್ ಒಂದನ್ನು 2 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಇದು ಡಾರ್ಸಿಯ ಮೊದಲ ಟ್ವೀಟ್ ಆಗಿದೆ. ಇದನ್ನು ಮಾರ್ಚ್ 6, 2006 ರಂದು ಪೋಸ್ಟ್ ಮಾಡಿದ್ದರು.
ನಿಖರವಾಗಿ 15 ವರ್ಷಗಳ ನಂತರ ಅವರು ತಮ್ಮ ಟ್ವೀಟ್ ಅನ್ನು ಕ್ರಿಪ್ಟೋಕರೆನ್ಸಿ ರೂಪದಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದ್ದಾರೆ. ಈ ಘೋಷಣೆ ನಂತರ ಬಿಡ್ ಶುರುವಾಗಿದೆ. ಅತಿ ವೇಗದಲ್ಲಿ ಬಿಡ್ಡಿಂಗ್ ಬೆಲೆ 2,67,000 ಡಾಲರ್ ತಲುಪಿದೆ. ಅಂದರೆ ಸುಮಾರು 2 ಕೋಟಿ ರೂಪಾಯಿಯಾಗಿದೆ. ಜೆಸ್ಟ್ ಸೆಟ್ಟಿಂಗ್ ಅಪ್ ಮೈ ಟ್ವೀಟರ್ ಎಂದು ಡಾರ್ಸಿ ಟ್ವೀಟ್ ಮಾಡಿದ್ದರು. ಅದನ್ನೇ ಅವರು ಮಾರಾಟ ಮಾಡಲು ಮುಂದಾಗಿದ್ದಾರೆ.
ಎನ್‌ಎಕ್ಸ್‌ಟಿ ಗಾಗಿ ಡಾರ್ಸೆ, ವ್ಯಾಲ್ಯೂಯಬಲ್ಸ್ ಎಂಬ ಪ್ಲಾಟ್‌ಫಾರ್ಮ್ ಮೂಲಕ ಟ್ವೀಟ್ ಮಾಡಿದ್ದಾರೆ. ವ್ಯಾಲ್ಯೂಯಬಲ್ಸ್ ಪ್ರಕಾರ, ಈ ಟ್ವೀಟ್, ಟ್ವಿಟರ್ ನ ಡಿಜಿಟಲ್ ಪ್ರಮಾಣಪತ್ರವಾಗಿದೆ. ಇದ್ರಲ್ಲಿ ತಯಾರಕರ ಸಹಿ ಇದೆ. ಆದಾಗ್ಯೂ ಈ ಟ್ವೀಟ್ ಸುಮಾರು 15 ವರ್ಷಗಳಿಂದ ಅಂತರ್ಜಾಲದಲ್ಲಿ ಸಾರ್ವಜನಿಕವಾಗಿ ಲಭ್ಯವಿದೆ.
ಅನನ್ಯ ಡಿಜಿಟಲ್ ವಸ್ತುಗಳ ಮಾಲೀಕತ್ವವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಎನ್ಎಕ್ಸ್ಟಿ ಜನರಿಗೆ ಅವಕಾಶ ನೀಡುತ್ತದೆ. ಖ್ಯಾತ ಕಲಾವಿದ ಗ್ರಿಮ್ಸ್ ಇತ್ತೀಚೆಗೆ ಹಲವಾರು ಎನ್‌ಎಕ್ಸ್‌ಟಿ ವಸ್ತುಗಳನ್ನು ಸುಮಾರು 60 ಲಕ್ಷ ಡಾಲರ್ ಗೆ ಮಾರಾಟ ಮಾಡಿದ್ದಾರೆ.