ಮಧ್ಯ ಪ್ರದೇಶದ ದೇವಾಸ್‌ನಲ್ಲಿರುವ ಸರ್ಕಾರಿ ಅಧಿಕಾರಿಯ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳನೊಬ್ಬ ತನಗೆ ಬಂಪರ್ ಲಾಟರಿಯೇ ಹೊಡೆದಿದೆ ಎಂದು ಭಾವಿಸಿದ್ದ.
ಆದರೆ ಮನೆಯಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ನಗದು ಹಾಗೂ ಚಿನ್ನಾಭರಣಗಳು ಇಲ್ಲದೇ ಇದ್ದ ಕಾರಣ ಬಹಳ ನಿರಾಶನಾದ ಈ ಕಳ್ಳ ನೋಟ್ ಒಂದರ ಮೇಲೆ, “ದುಡ್ಡೇ ಇಲ್ಲದಿದ್ದ ಮೇಲೆ ಮನೆಗೆ ಬೀಗ ಹಾಕಬಾರದಿತ್ತು ಕಲೆಕ್ಟರ್” ಎಂದು ಬರೆದು ಅದನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಈ ಚೀಟಿಯ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅಮೆಜಾನ್ ಇಂಡಿಯಾದಿಂದ ‘ಬಂಪರ್’ ಕೊಡುಗೆ
ಖಟೇಗಾಂವ್ ಜಿಲ್ಲೆಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನಿಯೋಜನೆಯಾಗಿರುವ ತ್ರಿಲೋಚನ್ ಸಿಂಗ್ ಗೌರ್ ಮನೆಯಲ್ಲಿ 30,000 ರೂ.ಗಳು ಹಾಗೂ ಒಂದಷ್ಟು ಚಿನ್ನಾಭರಣಗಳು ನಾಪತ್ತೆಯಾಗಿದೆ ಎಂದು ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಉಮ್ರಾವ್ ಸಿಂಗ್ ತಿಳಿಸಿದ್ದಾರೆ.
ತೆರಿಗೆ ರೀಫಂಡ್ ಖಾತೆಗೆ ಬರುವಂತೆ ಮಾಡುವುದು ಹೇಗೆ…?
ಕಳೆದ 15-20 ದಿನಗಳಿಂದ ತಮ್ಮ ಮನೆಯಲ್ಲಿ ಇಲ್ಲದಿದ್ದ ಗೌರ್ ಮರಳಿ ಮನೆಗೆ ಬಂದಾಗ ಕನ್ನ ಬಿದ್ದಿರುವುದು ಕಂಡಿದೆ. ಇದೇ ವೇಳೆ ತಮ್ಮ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಬಿದ್ದಿರುವುದನ್ನು ಕಂಡ ಗೌರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳ್ಳತನವಾದ ಮನೆ ಇರುವ ಪ್ರದೇಶದಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸವೂ ಇವೆ.
ಇಲ್ಲಿ ಕೈಸುಡ್ತಿದೆ ಹಾಲಿನ ಬೆಲೆ…..! ಜೇಬು ಬಿಸಿ ಮಾಡ್ತಿದೆ LPG ದರ
ಸರ್ಕಾರಿ ಅಧಿಕಾರಿಯ ನೋಟ್ ಪ್ಯಾಡ್ ಹಾಗೂ ಪೆನ್ ಬಳಸಿಕೊಂಡು ಈ ಸಂದೇಶ ಬರೆದ ಕಳ್ಳನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.