ಭಾನುವಾರದಂದು ರಕ್ಷಾ ಬಂಧನ ಅಂಗವಾಗಿ ಭಾರತ – ಪಾಕ್ ಗಡಿಯಲ್ಲಿ ಕಾರ್ಯನಿರತ ಯೋಧರು ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರತ ಅರೆಸೈನಿಕ ಪಡೆಯ ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರದ ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅಣ್ಣ-ತಂಗಿಯರ ಬಾಂಧವ್ಯಕ್ಕೆ ಸಾಕ್ಷಿಯಾದ ರಾಖಿಯನ್ನು ಯೋಧರು ಕೈಗೆ ಕಟ್ಟಿಕೊಂಡು ಮುಗುಳ್ನಗೆ ಬೀರಿದ್ದಾರೆ.
ನೃತ್ಯ ಮಾಡುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿ ಸಾವು
ಜಮ್ಮುವಿನಲ್ಲಿನ ಸಿಆರ್‍ಪಿಎಫ್ ಪಡೆಯ ಕೇಂದ್ರ ಕಚೇರಿಯಲ್ಲಿ ಕೂಡ ಭಾರತ ರಕ್ಷಾ ಪರ್ವ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳೀಯ ಮಹಿಳೆಯರು ಇಲ್ಲಿನ ಯೋಧರು, ಸೇನಾ ಸಿಬ್ಬಂದಿಗೆ ರಾಖಿ ಕಟ್ಟಿ ಶುಭಾಶಯ ತಿಳಿಸಿದ್ದಾರೆ.
ಕಾಲೇಜುಗಳಲ್ಲಿನ ಎನ್‍ಸಿಸಿಯಲ್ಲಿನ ವಿದ್ಯಾರ್ಥಿನಿಯರು ಕೂಡ ಸೇನಾ ನೆಲೆಗೆ ಭೇಟಿ ನೀಡಿ, ತಮ್ಮನ್ನು ಉಗ್ರರಿಂದ ರಕ್ಷಿಸುತ್ತಿರುವ ಯೋಧರಿಗೆ ರಾಖಿ ಕಟ್ಟಿ, ಸಿಹಿ ಹಂಚಿದ್ದಾರೆ.