ಕಳೆದ ಕೆಲವು ವಾರಗಳಿಂದ ವಿಶ್ವದಾದ್ಯಂತ ಫುಟ್ಬಾಲ್ ಜ್ವರ ಹೆಚ್ಚಾಗಿದೆ. ಫುಟ್ಬಾಲ್ ಪ್ರೇಮಿಗಳು ಕಣ್ಣು, ಕಿವಿ ತೆರೆದು ಪಂದ್ಯಾವಳಿಗಳನ್ನು ಗಮನಿಸುತ್ತಿದ್ದಾರೆ.
ಇದೇ ವೇಳೆ ವೃದ್ಧರೊಬ್ಬರು, ವಿಡಿಯೋಗೇಮ್ ನೋಡಿ ನೈಜ ಪುಟ್ಬಾಲ್ ಪಂದ್ಯಾವಳಿಯೆಂದು ಭಾವಿಸಿ 45 ನಿಮಿಷದ ಪೂರ್ಣ ಆಟವನ್ನು ಕುತೂಹಲದಿಂದ ಕಣ್ತುಂಬಿಕೊಳ್ಳುವ ಪ್ರಸಂಗವೊಂದು ನಡೆದಿದೆ.
ತಸ್ನೀಮ್ ಬರಾಕತ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದಂತೆ, ಅವರ ತಂದೆ ಕಣ್ಣು ಮಿಟುಕಿಸದೇ ಖುರ್ಚಿ ಬಿಟ್ಟೇಳದೇ ಫುಟ್ಬಾಲ್ ಪಂದ್ಯ ವೀಕ್ಷಿಸಿದ್ದಾರೆ. ಅದು ನೈಜ ಪಂದ್ಯವಾಗಿರಲಿಲ್ಲ. ಬದಲಿಗೆ ವಿಡಿಯೋ ಗೇಮ್ ಆಗಿತ್ತಂತೆ. ಫಿಫಾ ಹೋಲುವ ನಕಲಿ ವಿಡಿಯೋ ಗೇಮ್ ಅದಾಗಿತ್ತು.
ಬೆಕ್ಕಸಬೆರಗಾಗಿಸುತ್ತೆ ಪುಟ್ಟ ಬಾಲೆಯ ಅದ್ಬುತ ಸಾಧನೆ
ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ನಡುವಿನ ನಿಜವಾದ ಫುಟ್ಬಾಲ್ ಆಟ ಎಂದು ಭಾವಿಸಿ ಅವರು ತದೇಕಚಿತ್ತರಾಗಿ ನೋಡಿದ್ದರು. ಇದು ನಿಜವಲ್ಲ, ಅದು ಫಿಫಾ ಅಲ್ಲ, ಇದು ಫಿಫಾ ನಕಲಿ ವಿಡಿಯೋ ಗೇಮ್. ಅವುಗಳು ನಿಮಗೆ ನಕಲಿಯಾಗಿ ಕಾಣುತ್ತಿಲ್ಲವೇ? ನೀವು ಇದನ್ನು ಇಡೀ ಸಮಯ ನೋಡುತ್ತಿದ್ದೀರಾ ? ಎಂದು ಆಕೆ ತಂದೆಗೆ ಕೇಳುವುದೂ ಸಹ ವಿಡಿಯೊದಲ್ಲಿದೆ. ಆ ಸಣ್ಣ ಕ್ಲಿಪ್ ಈಗ ಟಿಕ್‌ಟಾಕ್‌ನಲ್ಲಿ 3 ಮಿಲಿಯನ್ ವೀಕ್ಷಣೆಗಳನ್ನುಗಳಿಸಿದೆ, ನೂರಾರು ಮಂದಿ ಬಗೆಬಗೆ ಕಾಮೆಂಟ್ ಮಾಡಿದ್ದಾರೆ.