alex Certify ಶಾಲೆಯಲ್ಲಿ ಕದ್ದ ಕಳ್ಳರು ಬೋರ್ಡ್​ ಮೇಲೆ ಪೊಲೀಸರಿಗೆ ಬಿಟ್ಟಿದ್ದಾರೆ ಈ ಸಂದೇಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಯಲ್ಲಿ ಕದ್ದ ಕಳ್ಳರು ಬೋರ್ಡ್​ ಮೇಲೆ ಪೊಲೀಸರಿಗೆ ಬಿಟ್ಟಿದ್ದಾರೆ ಈ ಸಂದೇಶ…!

ಕಳ್ಳರಲ್ಲಿ ಕೆಲವರು ಕ್ರಿಯಾಶೀಲರಾಗಿರುತ್ತಾರೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಹೊಸದೊಂದು ಪ್ರಕರಣದಲ್ಲಿ ಒಡಿಶಾದ ನಬರಂಗ್​ಪುರ ಜಿಲ್ಲೆಯ ಹೈಸ್ಕೂಲ್​ನಲ್ಲಿ ನಡೆದ ಕಳ್ಳತನವು ಪೊಲೀಸರನ್ನು ಹೌಹಾರುವಂತೆ ಮಾಡಿದೆ.

ಖಾತಿಗುಡಾ ಪ್ರೌಢಶಾಲೆಯಲ್ಲಿ ಶುಕ್ರವಾರ ದರೋಡೆ ನಡೆದಿದೆ. ಶನಿವಾರ ಬೆಳಿಗ್ಗೆ ಶಾಲೆಯ ಪ್ಯೂನ್, ಮುಖ್ಯ ಗೇಟ್​ ಮುರಿದಿರುವುದನ್ನು ಕಂಡು ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದರು. ನಂತರ, ಕಂಪ್ಯೂಟರ್​, ಪ್ರಿಂಟರ್​ ಕಮ್​ ಜೆರಾಕ್ಸ್​ ಯಂತ್ರ ಮತ್ತು ಇತರ ಬೆಲೆಬಾಳುವ ಕಚೇರಿಯ ಸ್ಟೇಷನರಿ ಕಾಣೆಯಾಗಿರುವುದು ಖಚಿತವಾಯಿತು. ಪೊಲೀಸರಿಗೂ ದೂರು ಮುಟ್ಟಿತು.

ಆದರೆ, ಅಲ್ಲೊಂದು ವಿಷೇಷವಿದೆ. “ಇಟ್ಸ್​ ಮಿ. ಧೂಮ್​ 4. ಶೀಘ್ರದಲ್ಲೇ ಬರಲಿದೆ” ಎಂದು ಕಳ್ಳರು ಕಪ್ಪು ಹಲಗೆಯ ಮೇಲೆ ಬರೆದಿಟ್ಟು ಹೋಗಿದ್ದಾರೆ. ಕೆಲವು ಮೊಬೈಲ್​ ನಂಬರ್​ ಅನ್ನು ಕೂಡ ಬರೆದಿದ್ದು, ತಮ್ಮನ್ನು ಹಿಡಿಯುವಂತೆ ಸವಾಲು ಹಾಕಿದಂತಿತ್ತು. ಪೊಲೀಸರನ್ನು ಹಾದಿ ತಪ್ಪಿಸಲು ಬರೆದಂತಿತ್ತು.

ಅಲ್ಲಿ ಬರೆಯಲಾದ ಫೋನ್​ ಸಂಖ್ಯೆಗಳಲ್ಲಿ ಒಂದು ಶಾಲೆಯ ಶಿಕ್ಷಕರದ್ದು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಗ್ಯಾಂಗ್​ ಬಗ್ಗೆ ಸುಳಿವು ಸಂಗ್ರಹಿಸಲು ಸೈಂಟಿಫಿಕ್​ ಸ್ಕಾಡ್ ಮತ್ತು ಸ್ನಿಫರ್​ ಡಾಗ್​ನೊಂದಿಗೆ ಪೊಲೀಸ್​ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...