ಕಳ್ಳರಲ್ಲಿ ಕೆಲವರು ಕ್ರಿಯಾಶೀಲರಾಗಿರುತ್ತಾರೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಹೊಸದೊಂದು ಪ್ರಕರಣದಲ್ಲಿ ಒಡಿಶಾದ ನಬರಂಗ್ಪುರ ಜಿಲ್ಲೆಯ ಹೈಸ್ಕೂಲ್ನಲ್ಲಿ ನಡೆದ ಕಳ್ಳತನವು ಪೊಲೀಸರನ್ನು ಹೌಹಾರುವಂತೆ ಮಾಡಿದೆ.
ಖಾತಿಗುಡಾ ಪ್ರೌಢಶಾಲೆಯಲ್ಲಿ ಶುಕ್ರವಾರ ದರೋಡೆ ನಡೆದಿದೆ. ಶನಿವಾರ ಬೆಳಿಗ್ಗೆ ಶಾಲೆಯ ಪ್ಯೂನ್, ಮುಖ್ಯ ಗೇಟ್ ಮುರಿದಿರುವುದನ್ನು ಕಂಡು ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದರು. ನಂತರ, ಕಂಪ್ಯೂಟರ್, ಪ್ರಿಂಟರ್ ಕಮ್ ಜೆರಾಕ್ಸ್ ಯಂತ್ರ ಮತ್ತು ಇತರ ಬೆಲೆಬಾಳುವ ಕಚೇರಿಯ ಸ್ಟೇಷನರಿ ಕಾಣೆಯಾಗಿರುವುದು ಖಚಿತವಾಯಿತು. ಪೊಲೀಸರಿಗೂ ದೂರು ಮುಟ್ಟಿತು.
ಆದರೆ, ಅಲ್ಲೊಂದು ವಿಷೇಷವಿದೆ. “ಇಟ್ಸ್ ಮಿ. ಧೂಮ್ 4. ಶೀಘ್ರದಲ್ಲೇ ಬರಲಿದೆ” ಎಂದು ಕಳ್ಳರು ಕಪ್ಪು ಹಲಗೆಯ ಮೇಲೆ ಬರೆದಿಟ್ಟು ಹೋಗಿದ್ದಾರೆ. ಕೆಲವು ಮೊಬೈಲ್ ನಂಬರ್ ಅನ್ನು ಕೂಡ ಬರೆದಿದ್ದು, ತಮ್ಮನ್ನು ಹಿಡಿಯುವಂತೆ ಸವಾಲು ಹಾಕಿದಂತಿತ್ತು. ಪೊಲೀಸರನ್ನು ಹಾದಿ ತಪ್ಪಿಸಲು ಬರೆದಂತಿತ್ತು.
ಅಲ್ಲಿ ಬರೆಯಲಾದ ಫೋನ್ ಸಂಖ್ಯೆಗಳಲ್ಲಿ ಒಂದು ಶಾಲೆಯ ಶಿಕ್ಷಕರದ್ದು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಗ್ಯಾಂಗ್ ಬಗ್ಗೆ ಸುಳಿವು ಸಂಗ್ರಹಿಸಲು ಸೈಂಟಿಫಿಕ್ ಸ್ಕಾಡ್ ಮತ್ತು ಸ್ನಿಫರ್ ಡಾಗ್ನೊಂದಿಗೆ ಪೊಲೀಸ್ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿತು.