alex Certify ʼತೆರಿಗೆʼ ಪಾವತಿದಾರರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತೆರಿಗೆʼ ಪಾವತಿದಾರರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಡೆಡ್‌ಲೈನ್‌ ಅನ್ನು ಸೆಪ್ಟೆಂಬರ್‌ 2021ರ ವರೆಗೂ ವಿಸ್ತರಿಸಿದ ನಂತರ, ಇದೀಗ ಆದಾಯ ತೆರಿಗೆಯ ಜಾಲತಾಣವು ಕನಿಷ್ಠ ಆರು ದಿನಗಳ ಮಟ್ಟಿಗೆ (ಜೂನ್‌ 1ರಿಂದ ಜೂನ್‌ 7) ಅಲಭ್ಯವಿರಲಿದೆ. ಜೂನ್ 7ರಂದು ಹೊಸ ಜಾಲತಾಣ ಲಾಂಚ್‌ ಮಾಡಬೇಕಾದ ಕಾರಣದಿಂದ ಈ ಅಡಚಣೆ ಇರಲಿದೆ.

“ಈ ಲಾಂಚ್‌ಗೆ ಸಿದ್ಧತೆ ನಡೆಸಬೇಕಾದ ಕಾರಣದಿಂದ ಹಾಗೂ ಸ್ಥಳಾಂತರದ ಚಟುವಟಿಕೆಗಳ ಕಾರಣದಿಂದ, ಅಸ್ತಿತ್ವದಲ್ಲಿರುವ ಇಲಾಖೆಯ ಪೋರ್ಟಲ್ www.incometaxindiaefiling.gov.in ಜೂನ್ 1ರಿಂದ ಜೂನ್ 7ರವರೆಗೆ ಅಲಭ್ಯವಿರಲಿದೆ” ಎಂದು ಆದಾಯ ತೆರಿಗೆ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

ಹಳೆಯ ಪೋರ್ಟಲ್ www.incometaxindiaefiling.gov.in ಜೂನ್ 7ರಿಂದ ನಿಷ್ಕ್ರಿಯಗೊಳ್ಳಲಿದ್ದು, ಹೊಸದಾದ — www.incometaxgov.in ಜೂನ್ 7ರಿಂದ ಕೆಲಸ ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...