alex Certify ಮೊಮ್ಮಗಳ ಮಾಡರ್ನ್​ ಉಡುಪು ಕಂಡು ಅಜ್ಜಿ ಕೇಳಿದ್ರು ಈ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗಳ ಮಾಡರ್ನ್​ ಉಡುಪು ಕಂಡು ಅಜ್ಜಿ ಕೇಳಿದ್ರು ಈ ಪ್ರಶ್ನೆ

ಈ ಜನರೇಷನ್​ ಗ್ಯಾಪ್​​ ಅನ್ನೋದು ಒಮ್ಮೊಮ್ಮೆ ಭಾರೀ ಸಮಸ್ಯೆಯನ್ನ ತಂದೊಡ್ಡುತ್ತದೆ. ಈ ಕಾಲದ ಸ್ಟೈಲ್​ಗಳು ಹಿರಿಯರಿಗೆ ಅರ್ಥವಾಗೋದಿಲ್ಲ. ಅವರ ಕಾಲದ ರೀತಿ ನೀತಿಗಳು ಕಿರಿಯರಿಗೆ ಸರಿ ಬರೋದಿಲ್ಲ. ಹೀಗಾಗಿ ಇದೊಂದು ಗೊಂದಲ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ.

ಇದೇ ಮಾತಿಗೆ ಸಾಕ್ಷಿ ಎಂಬಂತೆ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನ ಇನ್​ಸ್ಟಾಗ್ರಾಂನಲ್ಲಿ ವರಿಯಾತಾ ಸಿಂಗ್​ ಜಗ್ಲನ್​ ಎಂಬವರು ಶೇರ್​ ಮಾಡಿದ್ದಾರೆ.

ಇವರು ಫ್ಯಾಶನ್​​ ಸೆನ್ಸ್​ ಮೂಲಕವೇ ಇನ್​ಸ್ಟಾಗ್ರಾಂನಲ್ಲಿ ಹಿಟ್​ ಆಗಿದ್ದಾರೆ. ಈ ಬಾರಿ ಅಜ್ಜಿಯೊಂದಿಗಿನ ತಮ್ಮ ಫನ್ನಿ ಸಂಭಾಷಣೆಯನ್ನ ಶೇರ್​ ಮಾಡಿದ್ದಾರೆ.

ಈ ವೈರಲ್​ ವಿಡಿಯೋದಲ್ಲಿ ವರಿಯಾತಾ ಡ್ರೆಸ್​ನ್ನು ಹಿಡಿದುಕೊಂಡ ಅಜ್ಜಿ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನೋಡೋಕೆ ಸ್ವಿಮ್​ ಸೂಟ್​ನಂತೆ ಇರುವ ಬಾಡಿ ಸೂಟ್​ ಆಗಿದ್ದು ಇದನ್ನ ನೋಡಿದ ಅಜ್ಜಿ ನೀನು ಇಷ್ಟು ದೊಡ್ಡ ನ್ಯಾಪ್ಕಿನ್​ ಹಾಕುತ್ತೀಯಾ ಎಂದು ಮುಗ್ಧ ಪ್ರಶ್ನೆಯನ್ನ ಕೇಳಿದ್ದಾರೆ. ಈ ಫನ್ನಿ ವಿಡಿಯೋ 50 ಸಾವಿರಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...