ಈ ಜನರೇಷನ್ ಗ್ಯಾಪ್ ಅನ್ನೋದು ಒಮ್ಮೊಮ್ಮೆ ಭಾರೀ ಸಮಸ್ಯೆಯನ್ನ ತಂದೊಡ್ಡುತ್ತದೆ. ಈ ಕಾಲದ ಸ್ಟೈಲ್ಗಳು ಹಿರಿಯರಿಗೆ ಅರ್ಥವಾಗೋದಿಲ್ಲ. ಅವರ ಕಾಲದ ರೀತಿ ನೀತಿಗಳು ಕಿರಿಯರಿಗೆ ಸರಿ ಬರೋದಿಲ್ಲ. ಹೀಗಾಗಿ ಇದೊಂದು ಗೊಂದಲ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ.
ಇದೇ ಮಾತಿಗೆ ಸಾಕ್ಷಿ ಎಂಬಂತೆ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ವರಿಯಾತಾ ಸಿಂಗ್ ಜಗ್ಲನ್ ಎಂಬವರು ಶೇರ್ ಮಾಡಿದ್ದಾರೆ.
ಇವರು ಫ್ಯಾಶನ್ ಸೆನ್ಸ್ ಮೂಲಕವೇ ಇನ್ಸ್ಟಾಗ್ರಾಂನಲ್ಲಿ ಹಿಟ್ ಆಗಿದ್ದಾರೆ. ಈ ಬಾರಿ ಅಜ್ಜಿಯೊಂದಿಗಿನ ತಮ್ಮ ಫನ್ನಿ ಸಂಭಾಷಣೆಯನ್ನ ಶೇರ್ ಮಾಡಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ವರಿಯಾತಾ ಡ್ರೆಸ್ನ್ನು ಹಿಡಿದುಕೊಂಡ ಅಜ್ಜಿ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನೋಡೋಕೆ ಸ್ವಿಮ್ ಸೂಟ್ನಂತೆ ಇರುವ ಬಾಡಿ ಸೂಟ್ ಆಗಿದ್ದು ಇದನ್ನ ನೋಡಿದ ಅಜ್ಜಿ ನೀನು ಇಷ್ಟು ದೊಡ್ಡ ನ್ಯಾಪ್ಕಿನ್ ಹಾಕುತ್ತೀಯಾ ಎಂದು ಮುಗ್ಧ ಪ್ರಶ್ನೆಯನ್ನ ಕೇಳಿದ್ದಾರೆ. ಈ ಫನ್ನಿ ವಿಡಿಯೋ 50 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.
https://youtu.be/VjjSAxZrWiM