alex Certify ಐಟಿಬಿಪಿ ಕಾನ್ಸ್‌ ಟೇಬಲ್​ ‌ʼಅಫ್ರೀನ್​ ಅಫ್ರೀನ್ʼ​ ಹಾಡಿಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿಬಿಪಿ ಕಾನ್ಸ್‌ ಟೇಬಲ್​ ‌ʼಅಫ್ರೀನ್​ ಅಫ್ರೀನ್ʼ​ ಹಾಡಿಗೆ ನೆಟ್ಟಿಗರು ಫಿದಾ

ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​ನ ಇಬ್ಬರು ಕಾನ್ಸ್‌ ಟೇಬಲ್ ​ಗಳು ಹಿಟ್​ ಹಾಡು ಅಫ್ರೀನ್​ ಅಫ್ರೀನ್​ ಅನ್ನು ಪ್ರಸ್ತುತಪಡಿಸಿದ್ದು, ಆ ಹಾಡೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿಖ್​ ಕಾನ್ಸ್‌ ಟೇಬಲ್​ ವಿಕ್ರಮ್​ ಜೀತ್​ ಸಿಂಗ್​ ತಮ್ಮ ಭಾವರ್ಪೂಣ ಧ್ವನಿಯಲ್ಲಿ ಹಾಡಿದರೆ, ಕಾನ್ಸ್‌ ಟೇಬಲ್​ ವಿಕ್ರಮ್​ ಜೀತ್​ ಸಿಂಗ್​ ಪಕ್ಕದಲ್ಲಿ ನಿಂತು ಗಿಟಾರ್​ನಲ್ಲಿ ಹಾಡಿನ ಟ್ಯೂನ್​ ನುಡಿಸಿದ್ದಾರೆ.

ವಿಕ್ರಮ್​ ಜೀತ್​ ಈ ಹಾಡನ್ನು ಎಷ್ಟು ಭಾವುಕರಾಗಿ ಹಾಡಿದ್ದಾರೆ ಎಂದರೆ ಅದು ಕೇಳುಗರ ಕಣ್ಣಲ್ಲಿ ನೀರು ತರಿಸುತ್ತದೆ. 1 ನಿಮಿಷ 37 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ಆದರೂ ಸುಂದರವಾದ ಸಾಹಿತ್ಯ ಕೇಳುವುದನ್ನು ನಿಲ್ಲಿಸಲು ಸಾಧ್ಯವಿಲ್ಲ.

ಆಫ್ರೀನ್​ ಅಫ್ರೀನ್​ ರಹತ್​ ಫತೇಹ್​ ಅಲಿ ಖಾನ್​ ಮತ್ತು ಮೊಮಿನಾ ಮುಸ್ತೇಸನ್​ ಅವರ ಕೋಕ್​ ಸ್ಟುಡಿಯೋ ಸೀಸನ್​ 9ರ ಹಾಡಾಗಿದ್ದು, ಯೂಟ್ಯೂಬ್​ನಲ್ಲಿ 360 ಮಿಲಿಯನ್​ ವೀಕ್ಷಣೆ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...