alex Certify ಇಟಲಿಯಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗಲು ಗ್ರೀನ್ ಪಾಸ್ ಪಡೆದ ಜನ: ಮತ್ತೆ ಹೆಚ್ಚಾಗುತ್ತಿದೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಟಲಿಯಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗಲು ಗ್ರೀನ್ ಪಾಸ್ ಪಡೆದ ಜನ: ಮತ್ತೆ ಹೆಚ್ಚಾಗುತ್ತಿದೆ ಕೊರೊನಾ

ರೋಮ್: ಇಟಲಿಯಲ್ಲಿ ಮತ್ತೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಮತ್ತೆ ರೋಗಿಗಳು ತುಂಬಿದ್ದಾರೆ. ರೋಗಕ್ಕೆ ತುತ್ತಾದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಉತ್ತರ ಇಟಲಿಯ ದಕ್ಷಿಣ ಟೈರೋಲ್‌ನಲ್ಲಿ ಪಾರ್ಟಿ ನಡೆಸಲಾಗಿತ್ತು. ಈ ವೇಳೆ ಜನರು ಸೇರಿದ್ದರಿಂದ ವೇಗವಾಗಿ ಕೊರೊನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದೆ. ಆಸ್ಟ್ರಿಯಾ ಮೂಲದ 55 ವರ್ಷದ ವ್ಯಕ್ತಿಯೊಬ್ಬರು ಕೊರೊನ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಪಾರ್ಟಿಗಳಲ್ಲಿ ಭಾಗಿಯಾದವರಲ್ಲಿ ರೋಗಕ್ಕೆ ತುತ್ತಾದ ಒಂದು ಮಗು ಸೇರಿದಂತೆ ಕನಿಷ್ಠ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ರೋಗಿಗಳು ತೀವ್ರ ನಿಗಾದಲ್ಲಿದ್ದಾರೆ. ವೈರಸ್ ಸೋಂಕಿಗೆ ಒಳಗಾದವರು ಸಾಮಾನ್ಯವಾಗಿ ಗ್ರೀನ್ ಪಾಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇಟಲಿಯಲ್ಲಿ ಲಸಿಕೆ ಪಡೆದವರಿಗೆ ಗ್ರೀನ್ ಪಾಸ್ ನೀಡಲಾಗುತ್ತದೆ. ಈ ಪಾಸ್ ಅನ್ನು  ಯುರೋಪ್‌ನಾದ್ಯಂತ ಪ್ರಯಾಣಕ್ಕಾಗಿ ಸುಲಭಗೊಳಿಸಲು ಕಲ್ಪಿಸಲಾಗಿತ್ತು. ಇಟಲಿಯಲ್ಲಿ ವಸ್ತುಸಂಗ್ರಹಾಲಯಗಳು, ಜಿಮ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಒಳಾಂಗಣ ಭೋಜನದಂತಹ ಸ್ಥಳಗಳನ್ನು ಪ್ರವೇಶಿಸಲು ಬಯಸುವವರಿಗೆ ಗ್ರೀನ್ ಪಾಸ್ ಅಗತ್ಯವಾಗಿದೆ. ಹೀಗಾಗಿ ಹಲವು ಮಂದಿ ಲಸಿಕೆ ಪಡೆಯದಿದ್ದರೂ ಗ್ರೀನ್ ಪಾಸ್ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಟಲಿಯಲ್ಲಿ ಮತ್ತೆ ಕೊರೊನಾ ವೈರಸ್ ಏರಿಕೆಗೆ ಇದು ಕಾರಣವಾಗಿದೆ ಎಂದು ಹೇಳಲಾಗಿದೆ.

ಇನ್ನು ಪಾಸ್ ಪಡೆಯಲು, ಆ ವ್ಯಕ್ತಿಯು ಲಸಿಕೆ ಪಡೆಯಬೇಕಾಗಿದೆ. ಇದರ ಪ್ರಕಾರ, ಪಾಸ್ ಅನ್ನು 9 ತಿಂಗಳವರೆಗೆ ಬಳಸಬಹುದಾಗಿದೆ. ಹಸಿರು ಪಾಸ್ ಪಡೆಯುವ ಇನ್ನೊಂದು ವಿಧಾನವೆಂದರೆ ಕೊರೊನಾ ವೈರಸ್‌ ಪರೀಕ್ಷೆ ಪರೀಕ್ಷೆ ಮಾಡುವುದು. ಆದರೆ, ಇದು 48 ಗಂಟೆಗಳವರೆಗೆ ಮಾತ್ರ ಅನ್ವಯಿಸುತ್ತದೆ.

ಕೋವಿಡ್ -19 ಅನ್ನು ಉದ್ದೇಶಪೂರ್ವಕವಾಗಿ ಹರಡುವುದು ಸದ್ಯಕ್ಕೆ ಇಟಾಲಿಯನ್ ಕಾನೂನುಗಳ ಅಡಿಯಲ್ಲಿ ಅಪರಾಧವಾಗಿರುವುದರಿಂದ ಅದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಲವಾರು ಮಂದಿ ಇನ್ನೂ ಕೂಡ ಲಸಿಕೆ ಹಾಕಿಸಿಕೊಳ್ಳಲು ಮನಸ್ಸು ಮಾಡುತ್ತಿಲ್ಲ ಎಂದು ಹೇಳಲಾಗಿದೆ. ಕೋವಿಡ್-19 ಲಸಿಕೆಗಳನ್ನು ಪಡೆಯಲು ಹೆಚ್ಚುತ್ತಿರುವ ಒತ್ತಡದ ವಿರುದ್ಧ ಇತ್ತೀಚಿನ ವಾರಗಳಲ್ಲಿ ಹಲವಾರು ಪ್ರತಿಭಟನೆಗಳು ನಡೆದಿವೆ. ಆದರೆ, ಹೆಚ್ಚಿನ ರಾಜಕೀಯ ಪಕ್ಷಗಳು ಈ ಕ್ರಮವನ್ನು ಬೆಂಬಲಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...