alex Certify ಮಿ.ಬೀನ್‌ನಂತೆಯೇ ಇದ್ದಾರೆ ಈ ಅಪ್ಪ-ಮಗಳ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿ.ಬೀನ್‌ನಂತೆಯೇ ಇದ್ದಾರೆ ಈ ಅಪ್ಪ-ಮಗಳ ಜೋಡಿ

ನೀವು 90ರ ದಶಕದಲ್ಲಿ ಬಾಲ್ಯ ಕಳೆದು ಬಂದಿದ್ದರೆ ಮಿಸ್ಟರ್ ಬೀನ್ ಯಾರೆಂದು ತಿಳಿಸಿ ಹೇಳಬೇಕಾದ ಅಗತ್ಯವಿಲ್ಲ. ಬ್ರಿಟನ್‌ನ ಕಾಮಿಡಿ ನಟನ ಹೆಸರು ರೋವನ್ ಅಟ್ಕಿನ್‌ಸನ್ ಆಗಿದ್ದರೂ ಆತ ಎಲ್ಲರಿಗೂ ಮಿಸ್ಟರ್ ಬೀನ್ ಎಂದೇ ಚಿರಪರಿಚಿತ. ಈ ಶೋ ವರ್ಷಗಳ ಹಿಂದೆಯೇ ನಿಂತು ಹೋಗಿದ್ದರೂ ಸಹ ಈಗಲೂ ಅದರ ಜನಪ್ರಿಯತೆ ಏನೂ ಕಮ್ಮಿ ಇಲ್ಲ.

ಇಟಲಿಯಲ್ಲೊಂದು ಅಪ್ಪ-ಮಗಳ ಜೋಡಿಯೊಂದು ಮಿ.ಬೀನ್‌ನಂತೆಯೇ ಕಾಣುತ್ತಿದ್ದರು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ.

BREAKING: ಖ್ಯಾತ ನಟ, ರಂಗಕರ್ಮಿ ಜಿ.ಕೆ. ಗೋವಿಂದರಾವ್ ಇನ್ನಿಲ್ಲ

ರೋಮ್‌ ನಿವಾಸಿಯಾದ ಫ್ಯಾಬಿಯೋಲಾ ಬಗ್ಲಿಯೇರಿ ಹಾಗೂ ಅರ್ನಾಲ್ಡೋ ಮಂಗಿನಿ ಥೇಟ್ ಮಿ.ಬೀನ್ ಮತ್ತು ಆತನ ಮಗಳಂತೆಯೇ ಕಾಣುತ್ತಾರೆ. 18 ರ್ಷದ ಫ್ಯಾಬಿಯೋಲಾ ಮಿ.ಬೀನ್‌ನಂತೆಯೇ ಅನೇಕ ರೀತಿಯ ವಿನೋದಮಯ ಮುಖಭಾವ ತೋರುವ ಮೂಲಕ ಟಿಕ್‌ಟಾಕ್ ವಿಡಿಯೋಗಳಲ್ಲಿ ಖ್ಯಾತಿ ಪಡೆದಿದ್ದಾರೆ.

ಆಗಸ್ಟ್‌ನಲ್ಲಿ ಶೇರ್‌ ಮಾಡಲಾದ ಇನ್‌ಸ್ಟಾಗ್ರಾಂ ರೀಲ್ ಒಂದರಲ್ಲಿ, ಫ್ಯಾಬಿಯೋಲಾ ತನ್ನ ಕಾಮಿಕಲ್ ಅವತಾರದಲ್ಲಿ ’ನಾನು ಕೇಳಿದ ಪ್ರಶ್ನೆಗಳು’ ಟ್ರೆಂಡ್‌ನಲ್ಲೂ ಇದ್ದವು. ಈ ವೇಳೆ ಮಾತನಾಡಿ, ಮಿ.ಬೀನ್‌ಗೆ ಬಹಳ ಹೋಲುವ ತಮ್ಮೊಂದಿಗೆ ಚಿತ್ರಗಳನ್ನು ತೆಗೆದುಕೊಳ್ಳಲು ಪ್ರತಿನಿತ್ಯವೂ ಜನರು ತಮ್ಮನ್ನು ರಸ್ತೆ ಬದಿಯಲ್ಲಿ ನಿಲ್ಲಿಸುತ್ತಾರೆ ಎಂದು ಫ್ಯಾಬಿಯೋಲಾ ಹೇಳಿದ್ದರು.

ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ 20.6 ದಶಲಕ್ಷಕ್ಕಿಂತ ಹೆಚ್ಚು ಬಾರಿ ವೀವ್‌ ಮಾಡಲಾಗಿದೆ.

https://www.instagram.com/p/CUDg8UftETN/?utm_source=ig_web_copy_link

https://www.youtube.com/shorts/BZxepeckhsU

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...