alex Certify ಮಾರುತಿ ಸ್ವಿಫ್ಟ್​ ಕಾರನ್ನ ಲ್ಯಾಂಬೋರ್ಗಿನಿಯಾಗಿ ಮಾರ್ಪಾಡು ಮಾಡಿದ ಮೆಕಾನಿಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುತಿ ಸ್ವಿಫ್ಟ್​ ಕಾರನ್ನ ಲ್ಯಾಂಬೋರ್ಗಿನಿಯಾಗಿ ಮಾರ್ಪಾಡು ಮಾಡಿದ ಮೆಕಾನಿಕ್​..!

ಜೀವಮಾನದಲ್ಲಿ ಒಮ್ಮೆಯಾದರೂ ಒಂದು ಸ್ಪೋರ್ಟ್ಸ್ ಕಾರನ್ನ ಹೊಂದಬೇಕೆಂಬ ಬಯಕೆ ಬಹುತೇಕ ಮಂದಿಗೆ ಇರುತ್ತೆ. ಆದರೆ ಇಂತಹ ಐಷಾರಾಮಿ ಕಾರುಗಳನ್ನ ಖರೀದಿ ಮಾಡೋದು ಎಲ್ಲರಿಂದಲೂ ಆಗುವ ಕೆಲಸವಲ್ಲ. ಹೀಗಾಗಿ ಅನೇಕರ ಪಾಲಿಗೆ ಈ ಆಸೆ ಕನಸಾಗಿಯೇ ಉಳಿದುಬಿಡುತ್ತೆ.

ಆದರೆ ನೂರುಲ್​​ ಹಾಕ್​ ಎಂಬಾತ ಮಾತ್ರ ಕಡಿಮೆ ಖರ್ಚಿನಲ್ಲಿಯೇ ತನ್ನ ಈ ಕನಸನ್ನ ನನಸು ಮಾಡಿಕೊಂಡಿದ್ದಾನೆ. ಅರೆ..! ಕಡಿಮೆ ಹಣದಲ್ಲಿ ಅದ್ಯಾವ ಸ್ಪೋರ್ಟ್ಸ್ ಕಾರ್ ಸಿಕ್ಕಿರಬಹುದು ಎಂದು ಯೋಚನೆ ಮಾಡುತ್ತಿದ್ದೀರಾ..? ಅಸಲಿ ವಿಚಾರ ಬೇರೆಯದ್ದೇ ಇದೆ.

ಆಸ್ಸಾಂನ ಕರೀಂಗಂಜ್​ ನಿವಾಸಿಯಾದ ನೂರುಲ್​ ಒಬ್ಬ ಮೆಕ್ಯಾನಿಕ್​ ಆಗಿದ್ದು ಈತ ಮಾರುತಿ ಸ್ವಿಫ್ಟ್​ ಕಾರನ್ನ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್ ಕಾರನ್ನಾಗಿ ಮಾರ್ಪಾಡು ಮಾಡಿದ್ದಾರೆ. ತನ್ನ ಸ್ವಂತ ಗ್ಯಾರೇಜ್​ ಎನ್​ ಮಾರುತಿ ಕಾರ್​ ಕೇರ್​ನಲ್ಲಿ ಈ ರೀತಿ ಕಾರನ್ನ ಸಂಪೂರ್ಣ ಮಾರ್ಪಾಡು ಮಾಡಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ನೂರುಲ್​, ಈ ರೀತಿ ಕಾರನ್ನ ಮಾರ್ಪಾಡು ಮಾಡಲು ನಾನು 6.8 ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿದ್ದೇನೆ. ಸ್ಪೋರ್ಟ್ಸ್ ಕಾರನ್ನ ಹೊಂದಬೇಕು ಅನ್ನೋದು ನನ್ನ ಕನಸಾಗಿತ್ತು. ನನಗೆ ಲ್ಯಾಂಬೋರ್ಗಿನಿ ಕಾರುಗಳು ಅಂದರೆ ತುಂಬಾನೇ ಇಷ್ಟ ಕೊನೆಗೂ ನಾನು ಮಾರುತಿ ಸ್ವಿಫ್ಟ್​ ಕಾರನ್ನ ಮಾರ್ಪಾಡು ಮಾಡಿ ನನ್ನ ಕನಸನ್ನ ನನಸು ಮಾಡಿಕೊಂಡೆ ಎಂದು ಹೇಳಿದ್ದಾರೆ.

ಹಳದಿ ಬಣ್ಣದಲ್ಲಿರುವ ಈ ಕಾರು ನೋಡೋಕೆ ಅಸಲಿ ಲ್ಯಾಂಬೋರ್ಗಿನಿ ಕಾರಿನಂತೆಯೇ ಕಾಣುತ್ತದೆ. ಈ ಕಾರಿನ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...