
ಮಹಿಳಾ ಪತ್ರಕರ್ತೆ ಹಾಗೂ ತಾಲಿಬಾಲಿನಗಳ ನಡುವೆ ನಡೆದ ಸಂಭಾಷಣೆಯ ವಿಡಿಯೋ ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಬಳಿಕ ಸಂಪೂರ್ಣ ಜಗತ್ತು ಅಪ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕಿನ ಸ್ಥಿತಿ ಏನಾಗಬಹುದು ಎಂದು ಮರುಕಪಡುತ್ತಿದ್ದಾರೆ.
ಅಧ್ಯಕ್ಷ ಅಶ್ರಫ್ ಘನಿ ರಾಜೀನಾಮೆ ನೀಡಿ ದೇಶ ತೊರೆದ ಬಳಿಕ ಆಗಸ್ಟ್ 15ರಂದು ಅಪ್ಘಾನಿಸ್ತಾನ ಸರ್ಕಾರ ಪತನಗೊಂಡಿದೆ. ಅಪ್ಘನ್ ಅಧ್ಯಕ್ಷರ ನಿವಾಸದ ಮೇಲೆ ಹಿಡಿತ ಸಾಧಿಸಿದ ತಾಲಿಬಾನಿಗಳು ಸಂಪೂರ್ಣ ದೇಶವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ವಿಡಿಯೋದಲ್ಲಿ ಮಹಿಳಾ ಪತ್ರಕರ್ತೆ ಅಪ್ಘಾನಿಸ್ತಾನದ ಪ್ರಜಾಪ್ರಭುತ್ವದ ಅಡಿಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಾಲಿಬಾನಿಗಳು ಮಹಿಳೆಯರ ಹಕ್ಕುಗಳು ಇಸ್ಲಾಮಿಕ್ ಶರಿಯಾ ಕಾನೂನಿನ ಅಡಿಯಲ್ಲಿ ಬರಲಿದೆ ಎಂದು ಹೇಳಿದ್ದಾರೆ.
ಈ ವೇಳೆ ಮಹಿಳಾ ಪತ್ರಕರ್ತೆ ಪ್ರಜಾಪ್ರಭುತ್ವವನ್ನು ತಾಲಿಬಾನಿಗಳು ಒಪ್ಪಿಕೊಳ್ಳುತ್ತಾರೆಯೇ ಹಾಗೂ ಮಹಿಳಾ ರಾಜಕಾರಣಿಗಳಿಗೆ ಮತ ನೀಡಲು ಜನರಿಗೆ ಅವಕಾಶ ನೀಡುತ್ತೀರೆ ಎಂದು ಕೇಳಿದ ಪ್ರಶ್ನೆಗೆ ತಾಲಿಬಾನಿಗಳು ನಕ್ಕಿದ್ದಾರೆ.
ಈ ಪ್ರಶ್ನೆಯು ನಗೆ ತರಿಸುತ್ತಿದೆ ಎಂದು ಹೇಳಿದ ತಾಲಿಬಾನಿಯೊಬ್ಬ ಕ್ಯಾಮರಾವನ್ನು ಬಂದ್ ಮಾಡುವಂತೆ ಹೇಳುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.