alex Certify ನನ್ನ ಹತ್ರ ಪೆನ್ ಡ್ರೈವ್ ಇರೋದು ಸತ್ಯ , ಅದು ಯಾರದ್ದು ಎಂಬುದನ್ನು ಕಾದು ನೋಡಿ-ಲಕ್ಷ್ಮಣ್ ಸವದಿ ಬಾಂಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಹತ್ರ ಪೆನ್ ಡ್ರೈವ್ ಇರೋದು ಸತ್ಯ , ಅದು ಯಾರದ್ದು ಎಂಬುದನ್ನು ಕಾದು ನೋಡಿ-ಲಕ್ಷ್ಮಣ್ ಸವದಿ ಬಾಂಬ್

ಬೆಂಗಳೂರು : ನನ್ನ ಬಳಿ ಪೆನ್ ಡ್ರೈವ್ ಇರುವುದು ಸತ್ಯ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ  ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾರಾರು ಏನೇನು ಕುತಂತ್ರ ಮಾಡಿದ್ದಾರೋ ಅದು ಈ ಪೆನ್ ಡ್ರೈವ್ ನಲ್ಲಿದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ

ಇತ್ತೀಚೆಗಷ್ಟೇ ಮಾತನಾಡಿದ್ದ ಲಕ್ಷ್ಮಣ್ ಸವದಿ ‘ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಬಗ್ಗೆ ಮಾತನಾಡುವುದನ್ನು ನಾನು ನೋಡಿದ್ದೇನೆ. ತುಂಬಾ ಜನರ ಕಡೆ ಪೆನ್ಡ್ರೈವ್ ಇದ್ದಾವೆ. ನನ್ನ ಹತ್ತಿರ ಒಂದು ಪೆನ್ಡ್ರೈವ್ ಇದೆ, ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ ಎಂದರು. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ, ಹೆಚ್ಡಿಕೆ ಸುಖಾ ಸುಮ್ಮನೆ ಹಾಗೆ ಆರೋಪ ಮಾಡುತ್ತಿದ್ದಾರೆ’ ಎಂದಿದ್ದರು. ಇದೀಗ ನನ್ನ ಬಳಿ ಪೆನ್ ಡ್ರೈವ್ ಇರುವುದು ಸತ್ಯ, ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ಪೆನ್ ಡ್ರೈವ್ ಯಾವ ಪಕ್ಷಕ್ಕೆ ಸೇರಿದ್ದು ಎಂಬುದು ಬಹಿರಂಗವಾದ ಬಳಿಕ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದು ನೋಡಿ  ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ  ಬಾಂಬ್ ಸಿಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...