alex Certify ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿದೆ ವಿಪುಲ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿದೆ ವಿಪುಲ ಅವಕಾಶ

ಭಾರತದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಇಂಜಿನಿಯರ್‌ಗಳಿಗೆ ಬಹಳ ಬೇಡಿಕೆ ನಿರ್ಮಾಣವಾಗಿದೆ. ಒಂದು ಹುದ್ದೆಗೆ ಕನಿಷ್ಠ ಐದು ಮಂದಿ ಟೆಕ್ಕಿಗಳನ್ನು ಕಂಪನಿಗಳು ಶಾರ್ಟ್‌ ಲಿಸ್ಟ್‌ ಮಾಡಿಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನೈಜ ಕೌಶಲ ಇರುವ ಟೆಕ್ಕಿಗಳು ಐಟಿ ವಲಯದಲ್ಲೇ ವಿರಳ ಆಗುತ್ತಿದ್ದಾರೆ. ಬೃಹತ್‌ ಮೊತ್ತದ ಸಂಬಳ ನೀಡುವ ಕೊಡುಗೆ ಕೊಟ್ಟರೂ ಕಂಪನಿಗಳ ಅಗತ್ಯಕ್ಕೆ ತಕ್ಕಂತಹ ಟೆಕ್ಕಿಗಳು ಲಭ್ಯವಾಗುತ್ತಿಲ್ಲವಂತೆ.

ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಬೆಳ್ಳಿ 898 ರೂ., ಚಿನ್ನದ ದರ 375 ರೂ. ಇಳಿಕೆ

ಕೌಶಲಪೂರ್ಣ ಟೆಕ್ಕಿಗಳ ಕೊರತೆಯಿಂದಾಗಿ ಕಂಪನಿಗಳು ಹೊಸ ನೇಮಕಾತಿ ವೇಳೆ 50-75% ವೇತನ ಹೆಚ್ಚಳವಾಗಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕಳೆದ ದಶಕದಲ್ಲಿ ಐಟಿ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಟೆಕ್ಕಿಗಳಿಗಾಗಿ ಬೇಡಿಕೆ ನಿರ್ಮಾಣವಾಗಿರಲಿಲ್ಲ ಎಂದು ಎಯಾನ್‌ ಎಂಬ ಸಂಶೋಧನಾ ಸಂಸ್ಥೆ ಹೇಳಿದೆ. ಹೊಸಬರನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳು ನೇಮಕ ಮಾಡಿಕೊಳ್ಳುತ್ತಿದ್ದು, ಹಳೆಯ ಉದ್ಯೋಗಿಗಳ ಜಾಗವನ್ನು ಕೂಡ ಹೊಸಬರಿಂದ ತುಂಬುವ ಯತ್ನ ಕಂಪನಿಗಳು ನಡೆಸುತ್ತಿವೆ. ಒಟ್ಟಿನಲ್ಲಿ ನೈಜ ಕೌಶಲಭರಿತ, ಹೆಚ್ಚು ವೇಗವಾಗಿ ಕೆಲಸ ಮುಗಿಸುವ ಟೆಕ್ಕಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

ಕೆಲವು ಕಂಪನಿಗಳು ಕೌಶಲಪೂರ್ಣ ಉದ್ಯೋಗಿಗಳನ್ನು ಹುಡುಕಿಕೊಂಡು ಕಾಲೇಜು ಆವರಣಕ್ಕೂ ದೌಡಾಯಿಸಿವೆ. ಕ್ಯಾಂಪಸ್‌ ನೇಮಕಾತಿ ಮೂಲಕ ಮೈಂಡ್‌ಟ್ರೀ ಮತ್ತು ವಿಪ್ರೋದಂತಹ ಕಂಪನಿಗಳು ಹೊಸಬರಿಗೆ ಮಣೆ ಹಾಕುತ್ತಿವೆ. ಒಟ್ಟಾರೆಯಾಗಿ ದೇಶದ ಐಟಿ ಕ್ಷೇತ್ರದಲ್ಲಿ ಅಗತ್ಯ ಕೌಶಲವುಳ್ಳ ಟೆಕ್ಕಿಗಳ ಕೊರತೆ ಪ್ರಮಾಣವು ಶೇ. 24.4% ಇದ್ದು, ಮುಂದಿನ ಆರು ತಿಂಗಳಲ್ಲಿ ಇದು ಕೊಂಚ ಇಳಿಕೆ ಕಾಣುವ ನಿರೀಕ್ಷೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...