alex Certify ಭರ್ಜರಿ ಗುಡ್ ನ್ಯೂಸ್: ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ -ಕೇವಲ 5 ದಿನದಲ್ಲೇ ಸೋಂಕು ನಿವಾರಿಸುವ ಇನ್ಹೇಲರ್ ರೆಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ -ಕೇವಲ 5 ದಿನದಲ್ಲೇ ಸೋಂಕು ನಿವಾರಿಸುವ ಇನ್ಹೇಲರ್ ರೆಡಿ

ಕೊರೋನಾ ಸಾಂಕ್ರಾಮಿಕ ರೋಗದಿಂದ ಹೊರಬರಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆಗಳು ಪರಿಣಾಮಕಾರಿಯಾಗಿದ್ದು, ದೊಡ್ಡ ಭರವಸೆ ನೀಡಿವೆ.

ಆದರೆ ಲಸಿಕೆಯೊಂದೇ ಪರಿಹಾರವಾಗುವುದಿಲ್ಲ. ಅವುಗಳ ಜೊತೆಗೆ ಇನ್ಹೇಲರ್ ಕೂಡ ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ. ಕೇವಲ ಐದು ದಿನದಲ್ಲಿ ಕೊರೋನಾ ಗುಣಪಡಿಸುವ ಇನ್ಹೇಲರ್ ಅನ್ನು ಇಸ್ರೇಲ್ ಪ್ರಾಧ್ಯಾಪಕ ನಾದ್ರಿ ಅಬರ್ ಅವರು ಅಭಿವೃದ್ಧಿಪಡಿಸಿದ್ದಾರೆ. ಕೇವಲ ಐದು ದಿನದಲ್ಲಿ ಕೋವಿಡ್ ಗುಣಪಡಿಸುವ ಪವಾಡಸದೃಶ ಇನ್ಹೇಲರ್ ಅಭಿವೃದ್ಧಿಪಡಿಸಲಾಗಿದೆ.

ಇದು ಶೇಕಡ 96 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ. ಟೆಲ್ ಅವೀವ್ ಸೌರಾಸ್ಕಿ ವೈದ್ಯಕೀಯ ಕೇಂದ್ರದಲ್ಲಿ ಇದನ್ನು ಪರೀಕ್ಷಿಸಲಾಗಿದೆ. 30 ರೋಗಿಗಳಿಗೆ ಇನ್ಹೇಲರ್ ನೀಡಿದ್ದು, 29 ಮಂದಿ ವೈರಸ್ನಿಂದ ವೇಗವಾಗಿ ಚೇತರಿಸಿಕೊಂಡಿದ್ದಾರೆ. ಕೇವಲ ಮೂರರಿಂದ ಐದು ದಿನಗಳವರೆಗೆ ಆಸ್ಪತ್ರೆಯಿಂದ ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಬಹುದಾಗಿದೆ. ವೈರಸ್ ವಿರುದ್ಧ ಹೋರಾಡಲು ಒಂದೇ ಒಂದು ಇನ್ಹೇಲೇಶನ್ ಸಾಕು ಎಂದು ಹೇಳಲಾಗಿದೆ.

ಹೆಚ್ಚು ಗಂಭೀರವಾದ ಪ್ರಕರಣಗಳು ಇದ್ದರೂ ಕೂಡ ಕೊರೋನಾ ಗುಣಪಡಿಸಬಹುದು. ಇದೊಂದು ಅಭೂತಪೂರ್ವ ಆವಿಷ್ಕಾರ ಎಂದು ನಾದ್ರಿ ಅಬರ್ ಹೇಳಿದ್ದಾರೆ. ಈ ಸಾಧನವನ್ನು ಸಾರ್ವಜನಿಕ ಬಳಕೆಗೆ ನೀಡಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಗಳು ಅನುಮೋದನೆ ನೀಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...