ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಮನೆಯ ಒಳಗೇ ಇರೋದು ಅವಶ್ಯ ಬಿದ್ದರೆ ಮಾತ್ರ ಮನೆಯ ಹೊರಗೆ ಬರಬೇಕಾದ ಅನಿವಾರ್ಯತೆ ಉಂಟಾಗಿದೆ.
ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್, ಶಾಲಾ ಶಿಕ್ಷಣ ಇವೆಲ್ಲವನ್ನ ಮಿಸ್ ಮಾಡಿಕೊಳ್ತಿರುವ ಈ ಸಮಯದಲ್ಲೇ ಐಎಎಸ್ ಅಧಿಕಾರಿಯೊಬ್ಬರು ಶಿಕ್ಷಣದ ಬಗ್ಗೆ ನೀಡಿದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಗ್ರಾಸವಾಗಿದೆ.
ಐಎಎಸ್ ಅಧಿಕಾರಿ ಜಿತಿನ್ ಯಾದವ್ ಎಂಬವರು ಟ್ವಿಟರ್ನಲ್ಲಿ ನಿಮ್ಮ ಪದವಿಗಳು ಕೇವಲ ಒಂದು ಕಾಗದದ ಹಾಳೆಯಷ್ಟೇ. ನಿಜವಾದ ಪದವಿಯು ನಮ್ಮ ವರ್ತನೆ, ಅನುಭವಗಳ ಮೇಲೆ ಅವಲಂಬಿತವಾಗಿದೆ ಎಂದು ಬರೆದಿದ್ದರು. ಶಿಕ್ಷಣದ ವಿಚಾರದಲ್ಲಿ ಯಾದವ್ ನೀಡಿರುವ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ಯಾದವ್ರ ಈ ಮಾತಿಗೆ ತಲೆಬಾಗಿದ್ದರೆ ಬಹುತೇಕ ಮಂದಿ ಭಾರತೀಯ ಶಿಕ್ಷಣ ಪದ್ಧತಿಯ ಪರವಾಗಿ ಧ್ವನಿಯೆತ್ತಿದ್ದನ್ನ ಕಾಣಬಹುದಾಗಿದೆ .