alex Certify ಇದು ಪ್ರಾಣಿಯೋ, ಮನುಷ್ಯನೋ….?. ಅಬ್ಬಬ್ಬಾ ಎನ್ನುವ ವಿಸ್ಮಯದ ವಿಡಿಯೋ ವೈರಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಪ್ರಾಣಿಯೋ, ಮನುಷ್ಯನೋ….?. ಅಬ್ಬಬ್ಬಾ ಎನ್ನುವ ವಿಸ್ಮಯದ ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಜನರು ಪ್ರದರ್ಶಿಸುವ ಎಲ್ಲಾ ಟ್ಯಾಲೆಂಟ್‌ಗಳನ್ನು ಹುಡುಕಲು ಇಂಟರ್ನೆಟ್ ಅತ್ಯುತ್ತಮ ಸ್ಥಳವಾಗಿದೆ. ಅವುಗಳಲ್ಲಿ ಕೆಲವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿದರೆ, ಇನ್ನು ಕೆಲವು ನಿಮ್ಮನ್ನು ವಿಸ್ಮಯಗೊಳಿಸುತ್ತವೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಅಂತಹ ಒಂದು ವೀಡಿಯೊ ಕ್ಲಿಪ್ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ವೀಕ್ಷಿಸುವಂತೆ ಮಾಡುತ್ತದೆ.

ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಟ್ಯಾಲೆಂಟ್ ಹಂಟ್ ಶೋನಲ್ಲಿ ಕೆಲವು ಜನರು ಪ್ರದರ್ಶಿಸಿದ ಪ್ರದರ್ಶನವನ್ನು ತೋರಿಸುತ್ತದೆ. ವೇದಿಕೆಯ ಮೇಲೆ ಕುಳಿತಿರುವ ಗೂಬೆಯಿಂದ ವಿಡಿಯೋ ಪ್ರಾರಂಭವಾಗುತ್ತದೆ. ಮುಂದುವರೆದಂತೆ ಗೊತ್ತಾಗುವುದು ಇದು ಗೂಬೆಯಲ್ಲ, ಬದಲಿಗೆ ಕಲಾವಿದ ಎಂದು.

ಹೀಗೆ ಹಲವು ಪ್ರಾಣಿಗಳ ಚಿತ್ರಣವನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಕ್ಲಿಪ್ ಈಗಾಗಲೇ 88 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. “ಅಯ್ಯೋ, ಇದು ಭ್ರಮೆ ಎನಿಸುತ್ತಿದೆ” ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...