ಮಗು ಗರ್ಭದಲ್ಲಿದ್ದಾಗ ಅದರ ಬಗ್ಗೆ ಇರೋ ಕುತೂಹಲವೇ ಬೇರೆ. ಎಂಆರ್ಐ ಸ್ಕ್ಯಾನಿಂಗ್ ಮಾಡೋವಾಗ ಸಾಮಾನ್ಯವಾಗಿ ತಾಯಿಗೆ ಮಗುವಿನ ದೇಹವನ್ನ ತೋರಿಸೋದಿಲ್ಲ. ಏಕೆ ಹೀಗೆ ಮಾಡ್ತಾರೆ ಅನ್ನೋದಕ್ಕೆ ಮೆಡಿಕಲ್ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ. ಎಂಆರ್ಐ ಸ್ಕ್ಯಾನಿಂಗ್ನಲ್ಲಿ ಮಗು ಅತ್ಯಂತ ವಿಕಾರವಾಗಿ ಕಾಣೋದೇ ಇದಕ್ಕೆ ಕಾರಣ ಎಂದಿದ್ದಾರೆ.
ತಾಯಿ ಗರ್ಭದಲ್ಲಿದ್ದಾಗ ಮಗು ತುಂಬಾ ಅಂದರೆ ತುಂಬಾನೇ ವಿಚಿತ್ರವಾಗಿ ಕಾಣುತ್ತವೆ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಎಂಆರ್ಐ ಸ್ಕ್ಯಾನಿಂಗ್ ಒಂದರ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಮೆಡಿಕಲ್ ವಿದ್ಯಾರ್ಥಿ ಶೇರ್ ಮಾಡಿದ್ದು ಇದರಲ್ಲಿ ಮಗು ದೊಡ್ಡ ಕಣ್ಣುಳ್ಳ ಏಲಿಯನ್ನಂತೆ ಕಂಡುಬಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.