alex Certify ನಡುರಾತ್ರಿ ಕಾಣಿಸಿಕೊಂಡಿತ್ತಾ ಭೂತ ? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಾತ್ರಿ ಕಾಣಿಸಿಕೊಂಡಿತ್ತಾ ಭೂತ ? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಇತ್ತೀಚೆಗೆ ಭೂತ, ಪಿಶಾಚಿ, ಮಾಟಗಾತಿಯರಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಇದರಲ್ಲಿ ಹಳೆಯ ತುಕ್ಕು ಹಿಡಿದ ಬಿಳಿ ವ್ಯಾನ್ ಒಂದರ ಹಿಂದೆ ಭೂತ ಬರುವ ದೃಶ್ಯವಿದೆ. ಇದು ಹಾರುವ ಮಾಟಗಾತಿ ಎಂದೇ ವೈರಲ್​ ಆಗುತ್ತಿದೆ.

ನಡುರಾತ್ರಿಯಲ್ಲಿ ಪ್ರಾಣಿಯೊಂದು ವಿಚಿತ್ರವಾಗಿ ಅರಚಿಕೊಳ್ಳುತ್ತಿರುತ್ತದೆ. ಆ ಸಮಯದಲ್ಲಿ ಪ್ರಜ್ವಲಿಸುವ ಕಣ್ಣುಗಳೊಂದಿಗೆ ಭೂತವೊಂದು ಅಲ್ಲಿಗೆ ಬರುತ್ತದೆ. ಅರೆಕ್ಷಣ ಅದು ಮರೆಯಾಗಿ ಮತ್ತೆ ಕಾಣಿಸಿಕೊಳ್ಳುತ್ತದೆ. ಮೈ ಝುಂ ಎನಿಸಿರುವ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಡುರಾತ್ರಿ ನಿಜವಾಗಿಯೂ ಅಲ್ಲಿ ಭೂತ ಬಂದಿತ್ತು ಎಂದು ವಿಡಿಯೋದಲ್ಲಿ ಹೇಳಲಾಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಒಂದೊಂದು ಕಡೆ ಒಂದೊಂದು ಊರುಗಳ ಹೆಸರು ಉಲ್ಲೇಖಿಸಲಾಗಿದೆ. ಅಸಲಿಗೆ ಇದರ ಅಸಲಿಯತ್ತನ್ನು ಬೆನ್ನಟ್ಟಿ ಹೋದಾಗ ತಿಳಿದದ್ದೇ ಬೇರೆ.”ಜಾಂಬಿಯಾ ಮೂಲದ ವಿಷುಯಲ್ ಎಫೆಕ್ಟ್ ಕಲಾವಿದ ಜೋಸೆಫ್ ನ್ಜೋವು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅವರು ಮೋಜಿಗಾಗಿ ಈ ವಿಡಿಯೋ ಒಂದನ್ನು ರಚಿಸಿದ್ದರು. ನೈಜೀರಿಯಾದಲ್ಲಿ ಕಂಡ ಭೂತ ಇದು ಎಂದು ತಮಾಷೆಯಾಗಿ ಅವರು ಶೀರ್ಷಿಕೆ ಕೊಟ್ಟಿದ್ದರು.

ನಂತರ ಜನರಿಂದ ಜನರಿಗೆ ಈ ವಿಡಿಯೋ ಶೇರ್​ ಆಗುತ್ತಾ ಹೋಗಿದ್ದು, ಶೇರ್​ ಮಾಡಿದವರೆಲ್ಲಾ ತಮ್ಮ ಊರಿನ ಹೆಸರು ಉಲ್ಲೇಖಿಸತೊಡಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...