alex Certify ಎಸ್ಕಲೇಟರ್ ಇದ್ದರೂ ಇಲ್ಲಿ ಮೆಟ್ಟಿಲನ್ನೇ ಬಳಸುತ್ತಾರೆ ಜನ; ಇದರ ಹಿಂದಿದೆ ಒಂದು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್ಕಲೇಟರ್ ಇದ್ದರೂ ಇಲ್ಲಿ ಮೆಟ್ಟಿಲನ್ನೇ ಬಳಸುತ್ತಾರೆ ಜನ; ಇದರ ಹಿಂದಿದೆ ಒಂದು ಕಾರಣ

Is it Possible to Make People Ditch Escalators and Take the Stairs? This Clip  Says 'Yes'ಸಾಮಾನ್ಯವಾಗಿ ಯಾವುದೇ ಮೆಟ್ಟಿಲುಗಳನ್ನು ಹತ್ತುವುದೆಂದರೆ ಹಲವರಿಗೆ ತ್ರಾಸದಾಯಕವೇ ಹೌದು. ಅಯ್ಯೋ….. ಲಿಫ್ಟ್/ಎಸ್ಕಲೇಟರ್ ಇಲ್ವಾ..? ಮೆಟ್ಟಿಲು ಹತ್ತಲೇಬೇಕಾ ಅಂತಾ ಗೊಣಗಿಕೊಳ್ಳುತ್ತಾರೆ. ಆದರೆ, ಇಲ್ಲೊಂದೆಡೆ ಎಸ್ಕಲೇಟರ್ ವ್ಯವಸ್ಥೆ ಇದ್ರುನೂ ನೀವು ಮೆಟ್ಟಿಲನ್ನೇ ಬಳಸಲು ಇಷ್ಟಪಡಬಹುದು..!

ಹೌದು, ವೈರಲ್ ಆಗಿರುವ ಇತ್ತೀಚಿನ ವಿಡಿಯೋದಲ್ಲಿ ಪಿಯಾನೋ ಮೆಟ್ಟಿಲುಗಳು ಎಂದು ಪರಿಗಣಿಸಲ್ಪಡುವ ಹೊಸ ಪರಿಕಲ್ಪನೆಯನ್ನು ಹೊಂದಿದೆ. ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ವಾಲಾ ಅಫ್ಶರ್ ಅವರು ಹಂಚಿಕೊಂಡಿದ್ದಾರೆ.

ಸ್ವಲ್ಪ ವಿನೋದವನ್ನು ಪರಿಚಯಿಸುವ ಮೂಲಕ ಇತರರಿಗೆ ಆರೋಗ್ಯಕರ ಅಭ್ಯಾಸಗಳನ್ನು ಈ ರೀತಿಯೂ ಅಭಿವೃದ್ಧಿಪಡಿಸುವುದು ಎಂಬುದನ್ನು ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ. ವಿಡಿಯೋದಲ್ಲಿ, ಜನರು ಮೆಟ್ಟಿಲುಗಳನ್ನು ಪಿಯಾನೋ ತರಹದ ಪರಿಕಲ್ಪನೆಗೆ ಪರಿವರ್ತಿಸುವುದನ್ನು ಕಾಣಬಹುದು. ಇದರಿಂದ ಜನರು ಎಸ್ಕಲೇಟರ್‌ಗಳ ಬಳಕೆಯನ್ನು ತಪ್ಪಿಸುತ್ತಾರೆ. ಬಹುತೇಕ ಜನರು ಮೆಟ್ಟಿಲುಗಳನ್ನೇ ಹೆಚ್ಚಾಗಿ ಬಳಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಏಕೆಂದರೆ ಮೆಟ್ಟಿಲು ಹತ್ತುವಾಗ ಸಂಗೀತದ ಧ್ವನಿಯನ್ನು ನುಡಿಸುತ್ತದೆ. ಅನೇಕರು ಈ ಕಲ್ಪನೆಯನ್ನು ಆನಂದಿಸುತ್ತಿದ್ದಾರೆಂದು ತೋರುತ್ತದೆ.

ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಹಲವಾರು ಜನರು ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪರಿಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ.

— Vala Afshar (@ValaAfshar) May 7, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...