
ಹೌದು, ವೈರಲ್ ಆಗಿರುವ ಇತ್ತೀಚಿನ ವಿಡಿಯೋದಲ್ಲಿ ಪಿಯಾನೋ ಮೆಟ್ಟಿಲುಗಳು ಎಂದು ಪರಿಗಣಿಸಲ್ಪಡುವ ಹೊಸ ಪರಿಕಲ್ಪನೆಯನ್ನು ಹೊಂದಿದೆ. ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ವಾಲಾ ಅಫ್ಶರ್ ಅವರು ಹಂಚಿಕೊಂಡಿದ್ದಾರೆ.
ಸ್ವಲ್ಪ ವಿನೋದವನ್ನು ಪರಿಚಯಿಸುವ ಮೂಲಕ ಇತರರಿಗೆ ಆರೋಗ್ಯಕರ ಅಭ್ಯಾಸಗಳನ್ನು ಈ ರೀತಿಯೂ ಅಭಿವೃದ್ಧಿಪಡಿಸುವುದು ಎಂಬುದನ್ನು ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ. ವಿಡಿಯೋದಲ್ಲಿ, ಜನರು ಮೆಟ್ಟಿಲುಗಳನ್ನು ಪಿಯಾನೋ ತರಹದ ಪರಿಕಲ್ಪನೆಗೆ ಪರಿವರ್ತಿಸುವುದನ್ನು ಕಾಣಬಹುದು. ಇದರಿಂದ ಜನರು ಎಸ್ಕಲೇಟರ್‌ಗಳ ಬಳಕೆಯನ್ನು ತಪ್ಪಿಸುತ್ತಾರೆ. ಬಹುತೇಕ ಜನರು ಮೆಟ್ಟಿಲುಗಳನ್ನೇ ಹೆಚ್ಚಾಗಿ ಬಳಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಏಕೆಂದರೆ ಮೆಟ್ಟಿಲು ಹತ್ತುವಾಗ ಸಂಗೀತದ ಧ್ವನಿಯನ್ನು ನುಡಿಸುತ್ತದೆ. ಅನೇಕರು ಈ ಕಲ್ಪನೆಯನ್ನು ಆನಂದಿಸುತ್ತಿದ್ದಾರೆಂದು ತೋರುತ್ತದೆ.
ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಹಲವಾರು ಜನರು ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪರಿಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ.