ಐಸ್ಕ್ರೀಮ್ ಇಷ್ಟ ಪಡದವರು ಯಾರಿದ್ದಾರೆ ಹೇಳಿ…? ಐಸ್ ಕ್ರೀಮ್ ತಿನ್ನುವುದರಿಂದ ಸಾಕಷ್ಟು ಲಾಭ ಕೂಡ ಇದೆ ಎಂಬುದು ನಿಮಗೆ ಗೊತ್ತೇ? ಆದರೆ ಇದನ್ನು ಆರೋಗ್ಯಕರವಾಗಿ ತಯಾರಿಸಬೇಕು ಅಷ್ಟೇ. ಸಕ್ಕರೆ ಬಳಸದೇ, ನೈಸರ್ಗಿಕವಾಗಿ ಸಿಗುವ ಸಿಹಿಯಿಂದ ಮಾಡುವ ಐಸ್ ಕ್ರೀಮ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.
ಕ್ರೀಮ್, ಡೈರಿ ಉತ್ಪನ್ನವಾದ್ದರಿಂದ ಇದರಲ್ಲಿ ಅನೇಕ ಪೋಷಕಾಂಶಗಳು, ವಿಟಮಿನ್ ಗಳು ಇವೆ. ಇವುಗಳಿಂದ ಮೂಳೆಗಳು ಬಲಗೊಳ್ಳುತ್ತವೆ. ಈ ಉತ್ಪನ್ನಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದ್ದು, ಐಸ್ ಕ್ರೀಮ್ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತದೆ.
ಹಾಗೇ ಬಳಲಿಕೆಯಿಂದ ಮುಕ್ತಿ ಸಿಗುತ್ತದೆ. ಹಾಲಿನಿಂದ ತಯಾರಿಸಿದ ಉತ್ಪನ್ನಗಳು ರಕ್ತ ಮತ್ತು ದೇಹದ ತ್ವಚೆಗೆ ಸಹಕಾರಿಯಾಗಿದೆ.
ಅಂಗಾಂಶ ಮತ್ತು ಸ್ನಾಯುಗಳು ಬಲಗೊಳ್ಳುತ್ತದೆ. ಕೂದಲಿನ ಅಂದಕ್ಕೆ ಅಲ್ಲದೇ ದೇಹದ ಕೆಲವು ಭಾಗಗಳಿಗೆ ಪ್ರೋಟಿನ್ ಅಗತ್ಯ ಇದೆ. ಐಸ್ ಕ್ರೀಮ್ ತಿನ್ನುವ ಮೂಲಕ ದೇಹವು ಪ್ರೋಟೀನ್ ಪಡೆದುಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹಾಲು ಕುಡಿಯಲು ತೊಂದರೆ ಇದ್ದಲ್ಲಿ ಐಸ್ಕ್ರೀಮ್ ತಿನ್ನಬಹುದು. ಇದರಿಂದ ವಿಟಮಿನ್ ಕೊರತೆಯನ್ನು ಸರಿದೂಗಿಸಬಹುದು. ಅತಿಯಾದರೆ ಅಮೃತವೂ ವಿಷ, ಹಾಗಾಗಿ ಹಿತವಾಗಿ ಮಿತವಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ.