alex Certify ಗರ್ಭಿಣಿ ಕೊರೊನಾ ಲಸಿಕೆಯನ್ನ ಪಡೆಯಬಹುದಾ……? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಕೊರೊನಾ ಲಸಿಕೆಯನ್ನ ಪಡೆಯಬಹುದಾ……? ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಅಬ್ಬರ ಮಿತಿಮೀರಿದೆ. ಹೀಗಾಗಿ ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಈ ಸಂದರ್ಭದಲ್ಲಿ ಎಷ್ಟು ಜಾಗೃತೆಯಿಂದ ಇದ್ದರೂ ಸಹ ಅದು ಕಡಿಮೆಯೇ. ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಸಾಮಾಜಿಕ ಅಂತರವನ್ನ ಕಾಪಾಡಿಕೊಂಡ ಬಳಿಕವೂ ಸೋಂಕಿನ ಅಪಾಯ ತಪ್ಪಿದ್ದಲ್ಲ.

ಗರ್ಭಿಣಿಯರು ಕೊರೊನಾ ಲಸಿಕೆಯನ್ನ ಸ್ವೀಕರಿಸಬಹುದೇ..? ಈ ಒಂದು ಪ್ರಶ್ನೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಶುರುವಾಗಿದೆ. ಈಗಾಗಲೇ ಈ ಸಂಬಂಧ ಸಾಕಷ್ಟು ಪರ ವಿರೋಧಗಳ ಚರ್ಚೆ ನಡೀತಾನೆ ಇದೆ.

ಗರ್ಭಿಣಿ ಕೊರೊನಾ ಲಸಿಕೆ ಪಡೆಯಬಹುದೇ..?

ಮಹಿಳೆ ಗರ್ಭ ಧರಿಸಿದ ಸಂದರ್ಭದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆ ಕೊಂಚ ಕಡಿಮೆ. ಆದರೆ ಸಾಮಾನ್ಯ ಮಹಿಳೆಯರಿಗೆ ಹೋಲಿಸಿದ್ರೆ ಕೋವಿಡ್​ ಸಂಬಂಧಿ ಅನಾರೋಗ್ಯ ಗರ್ಭಿಣಿಯರಲ್ಲಿ ಹೆಚ್ಚಾಗಿ ಕಂಡು ಬರುತ್ತೆ. ಆದರೂ ಸಹ ಗರ್ಭಿಣಿ ಕೊರೊನಾ ಲಸಿಕೆಯನ್ನ ಸ್ವೀಕರಿಸಬಹುದು ಅನ್ನೋದಕ್ಕೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇದಕ್ಕಾಗಿ ಕಳೆದ ಅನೇಕ ದಿನಗಳಿಂದ ಸಾಕಷ್ಟು ಕ್ಲಿನಿಕಲ್​ ಪ್ರಯೋಗಗಳು ನಡೆಯುತ್ತಲೇ ಇದೆ. ಆದರೆ ಅಮೆರಿಕದಲ್ಲಿ ಗರ್ಭಿಣಿಯರಿಗೂ ಕೊರೊನಾ ಲಸಿಕೆಯನ್ನ ನೀಡಲಾಗುತ್ತೆ.

ಆದರೆ ದೇಶದಲ್ಲಿ ಇಲ್ಲಿಯವರೆಗೆ ಈ ರೀತಿಯ ಯಾವುದೇ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆಯನ್ನ ಗರ್ಭಿಣಿಯರಿಗೆ ನೀಡುವತ್ತ ಸರ್ಕಾರ ಗಮನ ಹರಿಸಬೇಕು ಅಂತಾ ಏಮ್ಸ್ ಮುಖ್ಯಸ್ಥ ಡಾ. ರಂದೀಪ್​ ಗುಲೇರಿಯಾ ಕೆಲ ದಿನಗಳ ಹಿಂದಷ್ಟೇ ಅಭಿಪ್ರಾಯ ಹೊರಹಾಕಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...