ಟೇಲರ್ ಸ್ವಿಫ್ಟ್, ತನ್ನ ಟ್ಯಾಲೆಂಟ್ ನಿಂದ ಇಡೀ ವಿಶ್ವದಲ್ಲೆ ಪ್ರಸಿದ್ಧವಾಗಿರೊ ಪಾಪ್ ಗಾಯಕಿ. ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿರುವ ಈಕೆಗೆ ಚಿಲಿಯ ಅಧ್ಯಕ್ಷ ಕೂಡ ಮನಸೋತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚಿಲಿ ದೇಶದ ಅಧ್ಯಕ್ಷ ಸ್ಥಾನಕ್ಕೇರಿರುವ ಗೇಬ್ರಿಯಲ್ ಬೋರಿಕ್ ತನ್ನನ್ನು ತಾನು ಸ್ವಿಫ್ಟಿ ಎಂದಿದ್ದಾರೆ.
ಟೇಲರ್ ಸ್ವಿಫ್ಟ್ ಅಭಿಮಾನಿಗಳು ತಮ್ಮನ್ನು ತಾವು ಸ್ವಿಫ್ಟಿ ಎಂದು ಹೆಸರಿಸಿಕೊಂಡಿದ್ದಾರೆ. ಇತ್ತೀಚಿಗೆ ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದ ಚಿಲಿ ಅಧ್ಯಕ್ಷ ಗೇಬ್ರಿಯಲ್ ಅವರೊಂದಿಗೆ ಹುಡುಗಿಯರಿಬ್ಬರು ಸೆಲ್ಫಿ ಕ್ಲಿಕ್ಕಿಸುವಾಗ Are you a Swiftie Or not?(ನೀವು ಸ್ವಿಫ್ಟ್ ಅಭಿಮಾನಿಯೊ, ಅಲ್ಲವೊ..?) ಎಂದು ಕೇಳಿದಾಗ, ಗೇಬ್ರಿಯಲ್ ತಮ್ಮ ಜೇಬಿನಿಂದ ಟೇಲರ್ ಸ್ವಿಫ್ಟ್ ಭಾವಚಿತ್ರ ತೋರಿಸಿ, ನಾನು ಟೇಲರ್ ಸ್ವಿಫ್ಟ್ ಅಭಿಮಾನಿ ಎಂದಿದ್ದಾರೆ. ಸಧ್ಯ ಎಲ್ಲೆಡೆ ಈ ವಿಡಿಯೋ ವೈರಲ್ ಆಗುತ್ತಿದ್ದು ಚಿಲಿ ಅಧ್ಯಕ್ಷ, ಟೇಲರ್ ಸ್ವಿಫ್ಟ್ ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ.
ದಾಖಲೆ ಬರೆದ ಕರ್ನಾಟಕ…! 100% ವ್ಯಾಕ್ಸಿನ್ ಪಡೆದ ರಾಜ್ಯದ ಮಧ್ಯ ವಯಸ್ಕರು
ಚಿಲಿಯ ಅತ್ಯಂತ ಕಿರಿಯ ಅಧ್ಯಕ್ಷನಾಗಿರುವ ಗೇಬ್ರಿಯಲ್ ಅಲ್ಲಿನ ಯುವ ಸಮೂಹದ ಅಚ್ಚುಮೆಚ್ಚಿನ ನಾಯಕ. ರಾಜಕೀಯವಾಗಿ ಅತ್ಯಂತ ಉನ್ನತ ಸ್ಥಾನದಲ್ಲಿರುವಾಗಲೂ ಸದಾ ಜನರೊಂದಿಗೆ ಬೆರೆಯುವ ಗೇಬ್ರಿಯಲ್ ಸ್ವಿಫ್ಟ್ ಗೆ ಅಪ್ಪಟ ಅಭಿಮಾನಿ. ಎಲೆಕ್ಷನ್ ಕ್ಯಾಂಪೇನ್ ನಡೆಯುತ್ತಿದ್ದ ಸಂದರ್ಭದಲ್ಲೂ ಟೇಲರ್ ಸ್ವಿಫ್ಟ್ ಅವರ ಒಡೆತನದ ಮರ್ಚ್ ಧರಿಸಿ ಫೋಟೊಗೆ ಪೋಸ್ ನೀಡಿದ್ದ ಗೇಬ್ರಿಯಲ್, “I feel #swiftie” ಎಂದು ಸ್ಪ್ಯಾನಿಷ್ ನಲ್ಲಿ ಕ್ಯಾಪ್ಷನ್ ನೀಡಿ, ಸ್ವಿಫ್ಟ್ ಅಭಿಮಾನಿಗಳ ಗಮನ ಸೆಳೆದಿದ್ದರು.