ತನ್ನ ಕೆಲಸದ ಸ್ಥಳದಲ್ಲಿ ಅನುಚಿತವಾಗಿ ಸ್ಪರ್ಶಿಸಿದ ಐರಿಶ್ ಮಹಿಳೆಗೆ ಈಗ £ 90,000 (ಅಂದಾಜು ರೂ. 90 ಲಕ್ಷ) ಪರಿಹಾರವನ್ನು ನೀಡಲಾಗಿದೆ. ಅನುಚಿತವಾಗಿ ವರ್ತಿಸಿದ್ದ ಮ್ಯಾನೇಜರ್ಗೆ ಪರಿಹಾರದ ಮೊತ್ತವನ್ನು ನೀಡಲು ಕೋರ್ಟ್ ನಿರ್ದೇಶಿಸಿದೆ.
ಮ್ಯಾನೇಜರ್ ಒಬ್ಬರು ಮಹಿಳೆಯ ವಿರುದ್ಧ ಅನುಚಿತವಾಗಿ ನಡೆದುಕೊಂಡಿದ್ದರು. ಜತೆಗೆ ಆಕೆಯ ಕೆನ್ನೆಗೆ ಹೊಡೆದಿದ್ದರು ಕೂಡ. ಅವಮಾನಕ್ಕೊಳಗಾದ ನಂತರ, ಮಹಿಳೆ ಉತ್ತರ ಐರ್ಲೆಂಡ್ ಮೂಲದ ತನ್ನ ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಸಮಸ್ಯೆ ಹೇಳಿಕೊಂಡಿದ್ದರು. ನಂತರ ಈ ಬಗ್ಗೆ ತನಿಖೆ ನಡೆದಿತ್ತು.
ಆದರೆ ಕಂಪೆನಿಯು ಮಹಿಳೆಯು ಪ್ರಚೋದನಕಾರಿ ಉಡುಪು ಧರಿಸಿದ್ದಳು. ಅದಕ್ಕೇ ಹೀಗೆ ಮಾಡಲಾಗಿದೆ ಎಂದಿತ್ತು. ನಂತರ ಈ ಪ್ರಕರಣವನ್ನು ಉತ್ತರ ಐರ್ಲೆಂಡ್ ಸಮಾನತೆ ಆಯೋಗದ ಮುಂದೆ ಮಂಡಿಸಲಾಯಿತು, ಅದರ ಮುಖ್ಯ ಕಮಿಷನರ್, ಗೆರಾಲ್ಡಿನ್ ಮೆಕ್‌ಗಾಹೆ ಅವರು ಘಟನೆಯನ್ನು ಖಂಡಿಸಿದರು, ಇದು ಆಘಾತಕಾರಿ ಎಂದು ಕರೆದರು. ಈ ಹಿನ್ನೆಲೆಯಲ್ಲಿ ಮಹಿಳೆಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.