alex Certify ಕನ್ಫರ್ಮ್ ‌ʼತತ್ಕಾಲ್ʼ ಟಿಕೆಟ್ ಪಡೆಯಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ಫರ್ಮ್ ‌ʼತತ್ಕಾಲ್ʼ ಟಿಕೆಟ್ ಪಡೆಯಲು ಇಲ್ಲಿದೆ ಟಿಪ್ಸ್

ಅನೇಕ ಸಂದರ್ಭಗಳಲ್ಲಿ ತುರ್ತಾಗಿ ಪ್ರಯಾಣದ ಪ್ಲಾನ್ ಮಾಡಿ ರೈಲು ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಆದರೆ ರೈಲಿನಲ್ಲಿ ಆಸನಗಳ ಲಭ್ಯತೆ ಕಷ್ಟ ಸಾಧ್ಯ, ಕನ್ ಫರ್ಮ್ಡ್ ಟಿಕೆಟ್ ಸಿಗುವುದಿಲ್ಲ.

ಭಾರತೀಯ ರೈಲ್ವೆಯು ತತ್ಕಾಲ್ ವ್ಯವಸ್ಥೆಯನ್ನು ಇಂತಹ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪ್ರಾರಂಭಿಸಿತು. ತತ್ಕಾಲ್ ರೈಲು ಟಿಕೆಟ್ ಅನ್ನು ಪ್ರಯಾಣದ ಒಂದು ದಿನ ಮೊದಲು ಮಾತ್ರ ಬುಕ್ ಮಾಡಬಹುದು.

3ಎಸಿ ಮತ್ತು ಮೇಲ್ಪಟ್ಟ ಕ್ಲಾಸ್‌ಗೆ ಬುಕಿಂಗ್ 10 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಸ್ಲೀಪರ್ ತತ್ಕಾಲ್ ಟಿಕೆಟ್‌ ಬುಕಿಂಗ್ 11 ಗಂಟೆಗೆ ಪ್ರಾರಂಭವಾಗುತ್ತದೆ. ಕೌಂಟರ್‌ನ ಹೊರತಾಗಿ, ತತ್ಕಾಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿಯೂ ಬುಕ್ ಮಾಡಬಹುದು.

ತತ್ಕಾಲ್ ಟಿಕೆಟ್ ಅನ್ನು ತ್ವರಿತವಾಗಿ ಬುಕ್ ಮಾಡುವುದು ಹೇಗೆ ಎಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆ:

– ಮೊದಲು, https://www.irctc.co.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಐ ಆರ್ ಸಿ ಟಿ ಸಿ ಖಾತೆಯನ್ನು ಮಾಡಿ

– ನಿಮ್ಮ ಐ ಆರ್ ಸಿ ಟಿ ಸಿ ಖಾತೆಯನ್ನು ಸೆಟಪ್ ಮಾಡಿದ ನಂತರ, ಮಾಸ್ಟರ್ ಲಿಸ್ಟ್ ರಚಿಸಿಕೊಳ್ಳಬೇಕು. (ನಿಮ್ಮ ಪ್ರೊಫೈಲ್‌ನಲ್ಲಿ ನೀವು ಮೊದಲೇ ಸಂಗ್ರಹಿಸಬಹುದಾದ ಪ್ರಯಾಣಿಕರು)

– ಪ್ರೊಫೈಲ್ ವಿಭಾಗದ ಡ್ರಾಪ್ ಡೌನ್‌ನಲ್ಲಿ ನೀವು ಮಾಸ್ಟರ್ ಲಿಸ್ಟ್ ಅನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.

– ಈ ಪುಟದಲ್ಲಿ ಹೆಸರು, ವಯಸ್ಸು, ಲಿಂಗ, ಬರ್ತ್ ಪ್ರಿಫರೆನ್ಸ್, ಆಹಾರ ಪ್ರಿಫರೆನ್ಸ್, ಮುಂತಾದ ವಿವರಗಳನ್ನು ಭರ್ತಿ ಮಾಡಬೇಕು. ಹಿರಿಯ ನಾಗರಿಕರಾಗಿದ್ದರೆ ಐಡಿ ಕಾರ್ಡ್ ಪ್ರಕಾರ ಕಾರ್ಡ್ ಸಂಖ್ಯೆ ನಮೂದಿಸಬೇಕು.

– ಈ ವಿವರಗಳನ್ನು ಸೇವ್ ಮಾಡಿದ ನಂತರ ಆಡ್ ಪ್ಯಾಸೆಂಜರ್ ಮೇಲೆ ಕ್ಲಿಕ್ ಮಾಡಿ. ಒಬ್ಬ ವ್ಯಕ್ತಿಯು 20 ಪ್ರಯಾಣಿಕರನ್ನು ಮಾಸ್ಟರ್ ಪಟ್ಟಿಯಲ್ಲಿ‌ ನಮೂದಿಸಿಡಬಹುದು.

– ಮಾಸ್ಟರ್ ಲಿಸ್ಟ್ ನಂತರ, ಪ್ರಯಾಣ ಟ್ರಾವೆಲ್ ಲಿಸ್ಟ್ ಮಾಡಿಕೊಳ್ಳುವುದು. ಇದು ಮೈ ಪ್ರೊಫೈಲ್‌ನ ಡ್ರಾಪ್‌ಡೌನ್‌ನಲ್ಲಿಯೂ ಕಂಡುಬರುತ್ತದೆ.

– 3ಎಸಿ ಅಥವಾ ಹೆಚ್ಚಿನ ಕ್ಲಾಸ್ ತತ್ಕಾಲ್ ಟಿಕೆಟ್ ಕಾಯ್ದಿರಿಸಲು 9.57ಕ್ಕೆ ಲಾಗ್ ಇನ್ ಮಾಡಬೇಕು.

– ಸ್ಲೀಪರ್ ಕ್ಲಾಸ್‌ಗೆ ತತ್ಕಾಲ್ ಟಿಕೆಟ್ ಬುಕಿಂಗ್ 11 ಗಂಟೆಗೆ ಪ್ರಾರಂಭವಾಗುತ್ತದೆ. ಪ್ರಯಾಣಿಕರು 10.57 ಗಂಟೆಗಳ ಮೂಲಕ ಲಾಗಿನ್ ಮಾಡಬೇಕು.

– ಪ್ಲಾನ್ ಮೈ ಜರ್ನಿ ಬಾಕ್ಸ್‌ನಲ್ಲಿ ಪ್ರಯಾಣದ ಪ್ರಕಾರ, ನಿಲ್ದಾಣಗಳ ಹೆಸರನ್ನು ನಮೂದಿಸಿ. ದಿನಾಂಕವನ್ನು ಆಯ್ಕೆ ಮಾಡಿ ಮತ್ತು ಫೈನಲ್ ಕ್ಲಿಕ್ ಮಾಡುವುದು.

– ಪ್ರಯಾಣದ ಮಾಹಿತಿಯನ್ನು ಸಲ್ಲಿಸಿದ ನಂತರ ನೀವು ರೈಲು ಸಲಹಾ ಪುಟ ತಲುಪುತ್ತೀರಿ. ಇಲ್ಲಿ ಮುಂದಿನ ದಿನದಿಂದ ನಿಮ್ಮ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳ ಪಟ್ಟಿ ಇರಲಿದೆ‌.

– ಸಾಮಾನ್ಯ, ಪ್ರೀಮಿಯಂ ತತ್ಕಾಲ್, ಮಹಿಳೆಯರು ಮತ್ತು ತತ್ಕಾಲ್ ಗಾಗಿ ಕ್ಲಿಕ್ ಮಾಡಲು ಬಟನ್ ಕಾಣಿಸುವುದು.

– ಈಗ ತತ್ಕಾಲ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ, ನೀವು ಬಯಸುವ ರೈಲಿನ ಕೋಚ್‌ಗಳಲ್ಲಿ ಒಂದನ್ನು ಆಯ್ಕೆಮಾಡಿ.

– ತತ್ಕಾಲ್ ಬುಕಿಂಗ್ ಸಮಯ ಪ್ರಾರಂಭವಾದಾಗ, ನಿಮ್ಮ ಆಸನವನ್ನು ಬುಕ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...