ಭಾರತೀಯ ರೈಲ್ವೇ ಕೆಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ (ಐ.ಆರ್.ಸಿ.ಟಿ.ಸಿ) ಶೇರುಗಳು ಮಂಗಳವಾರದಂದು ದಾಖಲೆ ಮಟ್ಟಕ್ಕೆ ಏರಿದ್ದು, ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಒಂದು ಲಕ್ಷ ಕೋಟಿ ರೂ.ಗಳ ಮಟ್ಟ ತಲುಪಿದೆ.
BREAKING: ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ; ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ
ಐ.ಆರ್.ಸಿ.ಟಿ.ಸಿ ಶೇರು 52 ವಾರಗಳಲ್ಲೇ ಅತ್ಯಂತ ಹೆಚ್ಚಿನ ಮಟ್ಟ ತಲುಪಿ ಮಂಗಳವಾರದ ವ್ಯವಹಾರದಂತ್ಯಕ್ಕೆ 6,375.15 ರೂ. ತಲುಪಿದೆ. 2019 ರಲ್ಲಿ 645 ಕೋಟಿ ರೂ.ಗಳ ಆರಂಭಿಕ ಸಾರ್ವಜನಿಕ ಆಫರಿಂಗ್ (ಐಪಿಓ) ಮಾಡಿದ ಐ.ಆರ್.ಸಿ.ಟಿ.ಸಿ, ಅಲ್ಲಿಂದ ಮಾರುಕಟ್ಟೆಯಲ್ಲಿ ಹೆಜ್ಜೆ ಇಡಲು ಆರಂಭಿಸಿತು.
ಬಿಎಸ್‌ಇ ಹಾಗೂ ಎನ್‌ಎಸ್‌ಇಯಲ್ಲಿ ಪಟ್ಟಿ ಮಾಡಲಾದ ಶೇರುಗಳ ಬೆಲೆಯು ಆರಂಭದಲ್ಲಿ 315-320/ಶೇರಿನಂತೆ ಇತ್ತು. ಇಂದಿನ ದಾಖಲೆಯ ಪ್ರದರ್ಶನ ತಲುಪುವಷ್ಟರಲ್ಲಿ ನಿಗಮದ ಶೇರುಗಳ ಬೆಲೆಯಲ್ಲಿ 712% ವೃದ್ಧಿಯಾಗಿದೆ.
ಮತ್ತೊಂದು ವಿಡಿಯೋ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಮುಂಬೈ ಪೊಲೀಸ್ ಬ್ಯಾಂಡ್ ತಂಡ
ರೈಲ್ವೇ ಜಾಲದಲ್ಲಿ ನೀರಿನ ಬಾಟಲಿಗಳಿಂದ ಹಿಡಿದು ಕೆಟರಿಂಗ್ ವ್ಯವಸ್ಥೆ ಪೂರೈಸಲು ಭಾರತೀಯ ರೈಲ್ವೇಯಿಂದ ಅನುಮೋದನೆ ಪಡೆದ ಏಕೈಕ ಸಂಸ್ಥೆ ಐ.ಆರ್.ಸಿ.ಟಿ.ಸಿ ಆಗಿದೆ.