ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಕನಸಿನ ಟೂರ್ ಪ್ಯಾಕೇಜ್ ಒಂದಕ್ಕೆ ಚಾಲನೆ ನೀಡಿದ್ದು, ಛತ್ತೀಸ್ಘಡದಿಂದ ಕಾಶ್ಮೀರದ ಪ್ರವಾಸೀ ತಾಣಗಳಿಗೆ ಪ್ರವಾಸದ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ.
ಐದು ರಾತ್ರಿಗಳು ಹಾಗೂ ಆರು ದಿನಗಳ ಈ ಟ್ರಿಪ್ನಲ್ಲಿ ಶ್ರೀನಗರ, ಗುಲ್ಮಾರ್ಗ್, ಸೋನ್ಮಾರ್ಗ ಮತ್ತು ಪಹಲ್ಗಾಮ್ಗಳಿಗೆ ರಾಯ್ಪುರದಿಂದ ಕರೆದೊಯ್ಯಲಾಗುವುದು. ಪ್ರತಿ ವ್ಯಕ್ತಿಗೆ 30,285ರೂಗಳ ಟಿಕೆಟ್ ದರ ನಿಗದಿ ಪಡಿಸಲಾಗಿದೆ.
ಬಹಿರಂಗ ನಮಾಜ್ ವಿರೋಧಿಸಿದ್ದ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ ಕರೆ
ದೆಹಲಿ ಮೂಲಕ ಕಾಶ್ಮೀರಕ್ಕೆ ತಲುಪಲಿರುವ ಪ್ರವಾಸಿಗರು, ಬಳಿಕ ದೆಹಲಿ ಮಾರ್ಗವಾಗಿಯೇ ರಾಯ್ಪುರಕ್ಕೆ ಮರಳಲಿದ್ದಾರೆ.