alex Certify ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳುವವರಿಗೆ IRCTC ‌ʼಬಂಪರ್ʼ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳುವವರಿಗೆ IRCTC ‌ʼಬಂಪರ್ʼ ಆಫರ್

ಕ್ರಿಸ್ಮಸ್ ಸಮಯದಲ್ಲಿ ಅಂತರರಾಷ್ಟ್ರೀಯ ಪ್ರವಾಸದ ಪ್ಲಾನ್ ಮಾಡುತ್ತಿದ್ದೀರಾ, ಬಜೆಟ್ ಪ್ಲಾನ್ ಹುಡುಕುತ್ತಿರುವಿರಾ ? ಹಾಗಾದರೆ ಐ.ಆರ್‌.ಸಿ.ಟಿ.ಸಿ.ಯ ಈ ಆಫರ್ ಗಮನಿಸಬಹುದು‌

ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಥಾಯ್ಲೆಂಡ್‌ ಗೆ ಕೈಗೆಟುಕುವ ವಿಮಾನ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಏರ್ ಟೂರ್ ಪ್ಯಾಕೇಜ್ ಡಿಸೆಂಬರ್ 23- 28 ರಿಂದ 5 ರಾತ್ರಿಗಳು, 6 ದಿನಗಳದ್ದಾಗಿರುತ್ತದೆ. ಈ ಪ್ರವಾಸದ ಸಮಯದಲ್ಲಿ ಕಡಲತೀರಗಳು, ಶ್ರೀಮಂತ ರಾಜಮನೆತನಗಳು ಮತ್ತು ದೇವಾಲಯಗಳಿಗೆ ಕರೆದೊಯ್ಯಲಾಗುತ್ತದೆ.

ಪ್ರವಾಸಿಗರು ಥಾಯ್ ಮಸಾಜ್ ಸೌಕರ್ಯ ಅನುಭವಿಸಬಹುದು, ಥಾಯ್ಲೆಂಡ್‌ ನ ಉನ್ನತ ಮಟ್ಟದ ಶಾಪಿಂಗ್ ಮಾಲ್‌ಗಳು, ಹೈ ಸ್ಟ್ರೀಟ್ ಅಂಗಡಿಗಳು, ಮಾರುಕಟ್ಟೆಗಳು ಮತ್ತು ಬ್ಯಾಕ್ ಸ್ಟ್ರೀಟ್ ಸ್ಟಾಲ್‌ಗಳಲ್ಲಿ ಶಾಪಿಂಗ್ ಮಾಡಬಹುದು.

62,900 ರೂ.ನಿಂದ ಪ್ರಾರಂಭವಾಗುವ ಏರ್ ಟೂರ್ ಪ್ರವಾಸದ ಪ್ಯಾಕೇಜ್‌ನಲ್ಲಿ ಪ್ರಯಾಣಿಕರು ಪಟ್ಟಾಯದಲ್ಲಿ ಕೋರಲ್ ಐಲ್ಯಾಂಡ್ ಪ್ರವಾಸ, ಪಟ್ಟಾಯದಲ್ಲಿನ ಅಲ್ಕಾಜರ್ ಶೋ, ನಾಂಗ್ ನೂಚ್ ಟ್ರಾಪಿಕಲ್ ಗಾರ್ಡನ್ ಪಟ್ಟಾಯ, ಬ್ಯಾಂಕಾಕ್‌ನ ಜೆಮ್ಸ್ ಗ್ಯಾಲರಿ ಮತ್ತು ಚಾಯೋಫಿಯಾಯಾ ಕ್ರೂಸ್‌ನಂತಹ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಇರಲಿದೆ.

ಇದಲ್ಲದೆ, ಅವರು ಬ್ಯಾಂಕಾಕ್, ಬ್ಯಾಂಕಾಕ್ ಸಿಟಿ ಟೆಂಪಲ್ ಟೂರ್‌ನಲ್ಲಿ ಮೆರೈನ್ ಪಾರ್ಕ್‌ನೊಂದಿಗೆ ಸಫಾರಿ ಮತ್ತು ಪ್ರವಾಸದ ಸಂಪೂರ್ಣ ಅವಧಿಯಲ್ಲಿ ಸ್ಥಳೀಯ ಟೂರ್ ಗೈಡ್ ಎಕ್ಸ್-ಬ್ಯಾಂಕಾಕ್‌ನ ಸೇವೆ ನೀಡಲಾಗುತ್ತದೆ.

ಉಪಹಾರ, ಊಟ ಮತ್ತು ರಾತ್ರಿಯ ಊಟವನ್ನು ಪ್ರವಾಸದ ಪ್ಯಾಕೇಜ್‌ನಲ್ಲಿ ರಿಟರ್ನ್ ಏರ್‌ಫೇರ್ (ಲಕ್ನೋ-ಬ್ಯಾಂಕಾಕ್-ಲಕ್ನೋ) ಜೊತೆಗೆ ಸೇರಿಸಲಾಗಿದೆ. 3-ಸ್ಟಾರ್ ಹೋಟೆಲ್‌ನಲ್ಲಿ ಹೋಟೆಲ್ ಸೌಕರ್ಯಗಳು, ವೀಸಾ ಶುಲ್ಕಗಳು ಮತ್ತು ಸಂಸ್ಕರಣಾ ಶುಲ್ಕಗಳು ಸೇರಿವೆ.

ಬುಕ್ ಮಾಡುವುದು ಹೇಗೆ ?

ಥಾಯ್ಲೆಂಡ್‌ ಗೆ ಈ ಕೈಗೆಟುಕುವ ಏರ್ ಟೂರ್ ಪ್ಯಾಕೇಜ್ ಅನ್ನು ಪಡೆಯಲು ಮಾನ್ಯವಾದ ಪಾಸ್‌ಪೋರ್ಟ್, ಅರ್ಜಿದಾರರ ಮೂಲ ಸಹಿಯೊಂದಿಗೆ ಸಂಪೂರ್ಣ ವೀಸಾ ಅರ್ಜಿ ನಮೂನೆ ಮತ್ತು ಪಾಸ್‌ಪೋರ್ಟ್ ಗಾತ್ರದ ಚಿತ್ರಗಳನ್ನು ಹೊಂದಿರಬೇಕು ಎಂಬುದನ್ನು ಪ್ರಯಾಣಿಕರು ಗಮನಿಸಬೇಕು. ಕ್ರಿಸ್ಮಸ್ ವಿಶೇಷ ಏರ್ ಟೂರ್ ಪ್ಯಾಕೇಜ್ ಕುರಿತು ಹೆಚ್ಚಿನ ವಿವರಗಳಿಗಾಗಿ https://www.irctctourism.com/pacakage_descriptionpackageCode=NLO08 ಗೆ ಭೇಟಿ ಕೊಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...