
ನೀವು ಹಣ ಸಂಪಾದನೆ ಮಾಡಲು ಯಾವುದಾದರೂ ಮಾರ್ಗವನ್ನ ಹುಡುಕುತ್ತಿದ್ದೀರಾ..? ಹೌದು ಎಂದಾದರೆ ನಿಮಗೊಂದು ಶುಭ ಸುದ್ದಿ ಇದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೋರೇಷನ್ ಬುಕ್ಕಿಂಗ್ ಏಜೆಂಟ್ ಆಗಿ ಕೆಲಸ ಮಾಡುವ ಮೂಲಕ 80 ಸಾವಿರ ರೂಪಾಯಿವರೆಗೆ ಸಂಪಾದನೆ ಮಾಡಬಹುದಾಗಿದೆ.
ಐಆರ್ಸಿಟಿಸಿ ಆನ್ಲೈನ್ ಟಿಕೆಟ್ ಬುಕ್ಕಿಂಗ್, ಕ್ಯಾಟರಿಂಗ್ ಸೇವೆಗಳನ್ನ ನೀಡುತ್ತದೆ. ದತ್ತಾಂಶಗಳು ನೀಡಿರುವ ಮಾಹಿತಿಯ ಪ್ರಕಾರ 55 ಪ್ರತಿಶತ ಟಿಕೆಟ್ಗಳನ್ನ ಆನ್ಲೈನ್ ಮೂಲಕವೇ ಕಾಯ್ದಿರಸಲಾಗುತ್ತದೆ. ಹೀಗಾಗಿ ಟಿಕೆಟ್ ಬುಕಿಂಗ್ ಏಜೆಂಟ್ಗಳಾಗಿ ಕಾರ್ಯ ನಿರ್ವಹಿಸುವ ಮೂಲಕ 80 ಸಾವಿರ ರೂಪಾಯಿವರೆಗೆ ಸಂಪಾದಿಸಬಹುದಾಗಿದೆ.
ಟಿಕೆಟ್ ಏಜೆಂಟ್ಗಳು ತತ್ಕಾಲ್, ವೇಟಿಂಗ್ ಲಿಸ್ಟ್ನಿಂದ ಹಿಡಿದು ಆರ್ಎಸಿವರೆಗೆ ಎಲ್ಲಾ ಟಿಕೆಟ್ಗಳನ್ನ ಬುಕ್ ಮಾಡಬಹುದಾಗಿದೆ. ಪ್ರತಿ ಬುಕ್ಕಿಂಗ್ಗೆ ಏಜೆಂಟ್ಗಳಿಗೆ ಕಮಿಷನ್ ಸಿಗಲಿದೆ.