alex Certify ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸ್ತೀರಾ ? ಹಾಗಾದ್ರೆ ಓದಲೇಬೇಕು ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸ್ತೀರಾ ? ಹಾಗಾದ್ರೆ ಓದಲೇಬೇಕು ಈ ಸುದ್ದಿ

ಭಾರತೀಯ ರೈಲ್ವೆ ಕ್ಯಾಟರಿಂಗ್​ ಹಾಗೂ ಪ್ರವಾಸೋದ್ಯಮ ನಿಗಮವು ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ರಾತ್ರಿ ವೇಳೆ ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡಲಿದೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್​​ ಹಾಗೂ ಪ್ರವಾಸೋದ್ಯಮ ನಿಗಮ ಹೇಳಿದೆ.

ರಾತ್ರಿ ಸಮಯ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಮುಖ ಮಾರ್ಗಸೂಚಿಗಳು ಇಲ್ಲಿದೆ :

ರಾತ್ರಿ ವೇಳೆ ಮೌನ ಕಾಯ್ದುಕೊಳ್ಳಬೇಕು. ರಾತ್ರಿ 10 ಗಂಟೆ ಬಳಿಕ ರೈಲಿನಲ್ಲಿ ಪ್ರಯಾಣಿಸುವವರಿಗೆ ಈ ನಿಯಮ ಅನ್ವಯಯವಾಗುತ್ತದೆ. ಸಹ ಪ್ರಯಾಣಿಕರಿಗೆ ತೊಂದರೆಯಾಗುವಷ್ಟರ ಮಟ್ಟಿಗೆ ಜೋರಾಗಿ ಮಾತನಾಡುವಂತಿಲ್ಲ.

ಜೋರಾಗಿ ಸಂಗೀತ ಕೇಳಲು ಅನುಮತಿ ಇರೋದಿಲ್ಲ. ರಾತ್ರಿ 10 ಗಂಟೆ ಬಳಿಕವೂ ಸಂಗೀತ ಕೇಳಲು ಇಚ್ಛಿಸಿದರೆ ಕಡ್ಡಾಯವಾಗಿ ಇಯರ್​ ಫೋನ್​ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಧೂಮಪಾನ ಅಥವಾ ಮದ್ಯಪಾನ ಮಾಡುವಂತಿಲ್ಲ.

ರಾತ್ರಿ 10 ಗಂಟೆ ಬಳಿಕ ಪ್ರಯಾಣಿಕರು ಕಡ್ಡಾಯವಾಗಿ ಲೈಟ್​ ಆಫ್​ ಮಾಡಬೇಕು. ಲೈಟ್​ ಆನ್​ ಇದ್ದರೆ ಮಲಗುವವರಿಗೆ ತೊಂದರೆ ಆಗುತ್ತದೆ ಎಂದು ಈ ನಿಯಮ ಅಳವಡಿಸಲಾಗಿದೆ.

ರಾತ್ರಿ 10 ಗಂಟೆ ಬಳಿಕ ಆಹಾರ ಸೇವೆ ಲಭ್ಯವಿರೋದಿಲ್ಲ. ಆದರೆ ಪ್ರಯಾಣಿಕರು ಇ ಕ್ಯಾಟರಿಂಗ್​ ಸೇವೆ ಮೂಲಕ ಊಟ ಅಥವಾ ಉಪಹಾರಗಳನ್ನು ಮೊದಲೇ ಆರ್ಡರ್​ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...