alex Certify ಮಕ್ಕಳ ‘ರೈಲು’ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ‘ರೈಲು’ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್

ಇತ್ತೀಚೆಗೆ ರೈಲ್ವೆ ಇಲಾಖೆ, ಟಿಕೆಟ್​ ಬುಕಿಂಗ್​ ವಿಚಾರದಲ್ಲಿ ಸುದ್ದಿಗೆ ಬಂದಿತ್ತು. ಮಕ್ಕಳ ಟಿಕೆಟ್​ ಬುಕಿಂಗ್​ ನಿಯಮ ಬದಲಾಗುತ್ತದೆ ಎಂಬ ಸುದ್ದಿಹರಿದಾಡಿತ್ತು, ಕೊನೆಗೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟನೆಯನ್ನೂ ನೀಡಿತು.

ಭಾರತೀಯ ರೈಲ್ವೆಯ ಸುತ್ತೋಲೆಯ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸಲು ರಿಸರ್ವೆಶನ್​ ಅಗತ್ಯವಿಲ್ಲ, ಟಿಕೆಟ್​ ಇಲ್ಲದೆಯೂ ರೈಲಿನಲ್ಲಿ ಪ್ರಯಾಣಿಸಬಹುದು. ಆದರೆ ಬರ್ತ್ ಅಗತ್ಯವಿದ್ದರೆ, ಟಿಕೆಟ್​ ಅನ್ನು ಬುಕ್​ ಮಾಡುವ ಮೂಲಕ ಪೂರ್ಣ ವಯಸ್ಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ಉದ್ದೇಶಕ್ಕಾಗಿ ಪ್ರಯಾಣಿಕರು ಮಕ್ಕಳಿಗೆ ಉಚಿತ ಟಿಕೆಟ್​ ಸೌಲಭ್ಯವನ್ನು ಪಡೆಯಲು ರೈಲುಗಳಲ್ಲಿ ಶಿಶು ಆಸನ ಆಯ್ಕೆಯನ್ನು ಆರಿಸಬೇಕಾಗುತ್ತದೆ.

ಪ್ರಯಾಣಿಕರು 1-5 ವರ್ಷದೊಳಗಿನ ಮಕ್ಕಳಿಗೆ ಬರ್ತ್ ಆಯ್ಕೆಯನ್ನು ಆರಿಸಿದರೆ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಗಮನಾರ್ಹ ಸಂಗತಿ ಎಂದರೆ ಭಾರತೀಯ ರೈಲ್ವೆ ಇತ್ತೀಚೆಗೆ ಲಕ್ನೋ ಮೇಲ್​ನ ಎಸಿ ಬೋಗಿಯಲ್ಲಿ ಮಕ್ಕಳ ಬರ್ತ್ ಆಯ್ಕೆಯನ್ನು ಸೇರಿಸಿದೆ, ಇದು ನೆಟ್ಟಿಗರಿಂದ ಮೆಚ್ಚುಗೆಯನ್ನು ಪಡೆದಿದೆ.

ಪ್ರಯಾಣಿಕರು 5 ರಿಂದ 11 ವರ್ಷದೊಳಗಿನ ಮಗುವಿಗೆ ಪೂರ್ಣ ಬರ್ತ್ ತೆಗೆದುಕೊಳ್ಳುತ್ತಿದ್ದರೆ, ರೈಲ್ವೆಗೆ ಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪೂರ್ಣ ಬರ್ತ್ ತೆಗೆದುಕೊಳ್ಳದಿದ್ದರೆ, ಟಿಕೆಟ್​ ದರದ ಅರ್ಧದಷ್ಟು ಮಾತ್ರ ಪಾವತಿಸಬೇಕಾಗುತ್ತದೆ.

ಐಆರ್​ಸಿಟಿಸಿಯಲ್ಲಿ ರೈಲು ಟಿಕೆಟ್​ ಬುಕ್​ ಮಾಡುವುದು ಹೇಗೆ ?

ಹೊಸ ಬಳಕೆದಾರರಾದರೆ ಮೊದಲು ಐಆರ್​ಸಿಟಿಸಿ ಪೋರ್ಟಲ್​ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಅಸ್ತಿತ್ವದಲ್ಲಿರುವ ಐಆರ್​ಸಿಟಿಸಿ ಬಳಕೆದಾರರು ಲಾಗ್​ ಇನ್​ ಮಾಡಿ ಮುಖಪುಟದಲ್ಲಿ, ‘ಟ್ರೇನ್​ ಟಿಕೆಟಿಂಗ್​’ ಆಯ್ಕೆಯ ಅಡಿಯಲ್ಲಿ ‘ಪ್ಲಾನ್​ ಮೈ ಬುಕ್ಕಿಂಗ್​’ ಆಯ್ಕೆಯನ್ನು ಕ್ಲಿಕ್​ ಮಾಡಬೇಕು.

ನಂತರ ಪ್ರಯಾಣದ ದಿನಾಂಕ, ರೈಲು ಮತ್ತು ತಲುಪಬೇಕಾದ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳುವುದು. ಸರ್ಚ್​ ಟ್ರೈನ್ಸ್​ ಆಯ್ಕೆಯ ಮೇಲೆ ಕ್ಲಿಕ್​ ಮಾಡಿದಾಗ ರೈಲುಗಳ ಪಟ್ಟಿ ಕಾಣಿಸುತ್ತದೆ. ರೈಲುಗಳನ್ನು ನಿರ್ಧರಿಸಿದ ನಂತರ, ಪ್ರಯಾಣಿಕರನ್ನು ಸೇರಿಸಲು ಪ್ರಯಾಣಿಕರ ವಿವರಗಳ ಆಯ್ಕೆಯನ್ನು ಕ್ಲಿಕ್​ ಮಾಡುವುದು.

ನಮೂದಿಸಿದ ಎಲ್ಲಾ ಬುಕಿಂಗ್​ ವಿವರಗಳನ್ನು ಪರಿಶೀಲಿಸಲು ಮತ್ತು ಖಚಿತಪಡಿಸಲು ‘ರಿವ್ಯೂ ಜರ್ನಿ ಡೀಟೇಲ್ಸ್​’ ಆಯ್ಕೆಯ ಮೇಲೆ ಕ್ಲಿಕ್​ ಮಾಡಬೇಕು.

ಬಳಿಕ ಪ್ರಯಾಣ ದರ ಪಾವತಿ ಮಾಡು ‘ಪಾವತಿಸಲು ಮುಂದುವರಿಯಿರಿ’ ಆಯ್ಕೆಯನ್ನು ಟ್ಯಾಪ್​ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...