ಇತ್ತೀಚೆಗೆ ರೈಲ್ವೆ ಇಲಾಖೆ, ಟಿಕೆಟ್ ಬುಕಿಂಗ್ ವಿಚಾರದಲ್ಲಿ ಸುದ್ದಿಗೆ ಬಂದಿತ್ತು. ಮಕ್ಕಳ ಟಿಕೆಟ್ ಬುಕಿಂಗ್ ನಿಯಮ ಬದಲಾಗುತ್ತದೆ ಎಂಬ ಸುದ್ದಿಹರಿದಾಡಿತ್ತು, ಕೊನೆಗೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟನೆಯನ್ನೂ ನೀಡಿತು.
ಭಾರತೀಯ ರೈಲ್ವೆಯ ಸುತ್ತೋಲೆಯ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸಲು ರಿಸರ್ವೆಶನ್ ಅಗತ್ಯವಿಲ್ಲ, ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣಿಸಬಹುದು. ಆದರೆ ಬರ್ತ್ ಅಗತ್ಯವಿದ್ದರೆ, ಟಿಕೆಟ್ ಅನ್ನು ಬುಕ್ ಮಾಡುವ ಮೂಲಕ ಪೂರ್ಣ ವಯಸ್ಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ಉದ್ದೇಶಕ್ಕಾಗಿ ಪ್ರಯಾಣಿಕರು ಮಕ್ಕಳಿಗೆ ಉಚಿತ ಟಿಕೆಟ್ ಸೌಲಭ್ಯವನ್ನು ಪಡೆಯಲು ರೈಲುಗಳಲ್ಲಿ ಶಿಶು ಆಸನ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಪ್ರಯಾಣಿಕರು 1-5 ವರ್ಷದೊಳಗಿನ ಮಕ್ಕಳಿಗೆ ಬರ್ತ್ ಆಯ್ಕೆಯನ್ನು ಆರಿಸಿದರೆ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಗಮನಾರ್ಹ ಸಂಗತಿ ಎಂದರೆ ಭಾರತೀಯ ರೈಲ್ವೆ ಇತ್ತೀಚೆಗೆ ಲಕ್ನೋ ಮೇಲ್ನ ಎಸಿ ಬೋಗಿಯಲ್ಲಿ ಮಕ್ಕಳ ಬರ್ತ್ ಆಯ್ಕೆಯನ್ನು ಸೇರಿಸಿದೆ, ಇದು ನೆಟ್ಟಿಗರಿಂದ ಮೆಚ್ಚುಗೆಯನ್ನು ಪಡೆದಿದೆ.
ಪ್ರಯಾಣಿಕರು 5 ರಿಂದ 11 ವರ್ಷದೊಳಗಿನ ಮಗುವಿಗೆ ಪೂರ್ಣ ಬರ್ತ್ ತೆಗೆದುಕೊಳ್ಳುತ್ತಿದ್ದರೆ, ರೈಲ್ವೆಗೆ ಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪೂರ್ಣ ಬರ್ತ್ ತೆಗೆದುಕೊಳ್ಳದಿದ್ದರೆ, ಟಿಕೆಟ್ ದರದ ಅರ್ಧದಷ್ಟು ಮಾತ್ರ ಪಾವತಿಸಬೇಕಾಗುತ್ತದೆ.
ಐಆರ್ಸಿಟಿಸಿಯಲ್ಲಿ ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ ?
ಹೊಸ ಬಳಕೆದಾರರಾದರೆ ಮೊದಲು ಐಆರ್ಸಿಟಿಸಿ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಅಸ್ತಿತ್ವದಲ್ಲಿರುವ ಐಆರ್ಸಿಟಿಸಿ ಬಳಕೆದಾರರು ಲಾಗ್ ಇನ್ ಮಾಡಿ ಮುಖಪುಟದಲ್ಲಿ, ‘ಟ್ರೇನ್ ಟಿಕೆಟಿಂಗ್’ ಆಯ್ಕೆಯ ಅಡಿಯಲ್ಲಿ ‘ಪ್ಲಾನ್ ಮೈ ಬುಕ್ಕಿಂಗ್’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ನಂತರ ಪ್ರಯಾಣದ ದಿನಾಂಕ, ರೈಲು ಮತ್ತು ತಲುಪಬೇಕಾದ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳುವುದು. ಸರ್ಚ್ ಟ್ರೈನ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ರೈಲುಗಳ ಪಟ್ಟಿ ಕಾಣಿಸುತ್ತದೆ. ರೈಲುಗಳನ್ನು ನಿರ್ಧರಿಸಿದ ನಂತರ, ಪ್ರಯಾಣಿಕರನ್ನು ಸೇರಿಸಲು ಪ್ರಯಾಣಿಕರ ವಿವರಗಳ ಆಯ್ಕೆಯನ್ನು ಕ್ಲಿಕ್ ಮಾಡುವುದು.
ನಮೂದಿಸಿದ ಎಲ್ಲಾ ಬುಕಿಂಗ್ ವಿವರಗಳನ್ನು ಪರಿಶೀಲಿಸಲು ಮತ್ತು ಖಚಿತಪಡಿಸಲು ‘ರಿವ್ಯೂ ಜರ್ನಿ ಡೀಟೇಲ್ಸ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಬಳಿಕ ಪ್ರಯಾಣ ದರ ಪಾವತಿ ಮಾಡು ‘ಪಾವತಿಸಲು ಮುಂದುವರಿಯಿರಿ’ ಆಯ್ಕೆಯನ್ನು ಟ್ಯಾಪ್ ಮಾಡಬೇಕು.