ಇರಾನ್ನಲ್ಲಿ ಸಾರ್ವಜನಿಕವಾಗಿ ಹಾಡು ಹೇಳಿದ ಕಾರಣಕ್ಕೆ, ಅದು ’ಹರಾಂ’ ಎಂದು ಮಹಿಳೆಯೊಬ್ಬರನ್ನು ಅವಮಾನಿಸಿದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ.
ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ ಈ ವ್ಯಕ್ತಿಗೆ ಘಟನೆ ನಡೆದ ಸ್ಥಳದಲ್ಲಿದ್ದ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಘಟನೆಯ ವಿಡಿಯೋ ಸದ್ಯ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇರಾನ್ ಪತ್ರಕರ್ತೆ ಮೆಸ್ಸಿಯಾ ಅಲೈಂಜ಼ಾದ್ ಹಂಚಿಕೊಂಡ ಈ ವಿಡಿಯೋದಲ್ಲಿ ಮಹಿಳೆಯ ಸಮರ್ಥನೆಗೆ ನಿಂತ ಜನಸಮೂಹವು ಆಕೆಗೆ ಕಿರುಕುಳ ಕೊಟ್ಟಾತನಿಗೆ ಬುದ್ಧಿ ಹೇಳುತ್ತಿರುವುದನ್ನು ನೋಡಬಹುದಾಗಿದೆ.
https://twitter.com/AlinejadMasih/status/1441987307595198473?ref_src=twsrc%5Etfw%7Ctwcamp%5Etweetembed%7Ctwterm%5E1441987307595198473%7Ctwgr%5E%7Ctwcon%5Es1_&ref_url=https%3A