alex Certify ಇರಾ ನನ್ನ ಪ್ರೀತಿ, ಆಕೆಯನ್ನ ಮುಟ್ಟಿದ್ರೆ ಹುಷಾರ್…! ಅಮೀರ್ ಖಾನ್ ಮಗಳ ಗೆಳೆಯನಿಗೆ ಅಭಿಮಾನಿ ಧಮ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇರಾ ನನ್ನ ಪ್ರೀತಿ, ಆಕೆಯನ್ನ ಮುಟ್ಟಿದ್ರೆ ಹುಷಾರ್…! ಅಮೀರ್ ಖಾನ್ ಮಗಳ ಗೆಳೆಯನಿಗೆ ಅಭಿಮಾನಿ ಧಮ್ಕಿ

ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಮತ್ತು ಆಕೆಯ ಗೆಳೆಯ ನೂಪುರ್ ಶಿಖರೆ ತಮ್ಮ ಪ್ರೀತಿಯನ್ನ ಎಂದೂ ಮುಚ್ಚಿಟ್ಟಿಲ್ಲ. ಕೆಲ ಸಮಯದಿಂದ ಒಟ್ಟಿಗಿರುವ ಈ ಜೋಡಿ, ಸಾಮಾಜಿಕ‌ ಮಾಧ್ಯಮದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಯಾವುದೇ ಚಿತ್ರ ಮಾಡದಿದ್ದರೂ ಫೇಮಸ್ ಆಗಿರುವ ಇರಾ ಖಾನ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗೆ ಒಬ್ಬ ಅಭಿಮಾನಿ‌ ನೂಪುರ್ ಅವರಿಗೆ, ಇರಾ ನನ್ನವಳು ಅವಳನ್ನ ಮುಟ್ಟಬೇಡಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದಾನೆ. ಇದಕ್ಕೆ ಫನ್ನಿ ಹಾಗೂ ಕ್ಯೂಟ್ ವಿಡಿಯೋ ಮೂಲಕ ನೂಪುರ್ ಉತ್ತರ ನೀಡಿದ್ದಾರೆ.

ಇರಾ ನನ್ನ ಪ್ರೀತಿ ಅವಳನ್ನು ಮುಟ್ಟಬೇಡಿ ಎಂಬ ಸಂದೇಶವನ್ನ ತೋರಿಸುವ ಮೂಲಕ ಶುರುವಾಗುವ ವಿಡಿಯೋ ಹೀಗೆ ಮುಂದುವರೆಯುತ್ತದೆ. ಫೋನ್ ಸ್ಕ್ರಾಲ್ ಮಾಡುತ್ತ ಕುಳಿತಿದ್ದ ಇರಾ ಗೆಳೆಯ ನೂಪುರ್ ಈ ಸಂದೇಶವನ್ನು ನೋಡುತ್ತಾರೆ, ನಂತರ ಪಕ್ಕದ ಟೇಬಲ್ ನಲ್ಲಿ ಕುಳಿತ ಇರಾಳನ್ನ ನೋಡುತ್ತಾರೆ‌.

ಎದ್ದು ಬಂದು ಆಕೆಯನ್ನ ಬೆರಳಿನಿಂದ ಪೋಕ್ ಮಾಡಿ, ಮತ್ತೆ ವಾಪಸ್ಸು ಬಂದು ಆಕೆಯ ಕೆನ್ನೆಗೆ ಮುತ್ತಿಡುತ್ತಾರೆ. ವಿಡಿಯೋವನ್ನ ಇನ್ನಷ್ಟು ಫನ್ನಿಯಾಗಿಸಿದ್ದು, ಇರಾಳ ಮುಖಭಾವ. ಹಿನ್ನೆಲೆಯಲ್ಲಿ “ಯು ಕಾಂಟ್ ಟಚ್ ದಿಸ್” ಹಾಡು ಸಹ ಗುನುಗುತ್ತಿದೆ. ಈ ಪೋಸ್ಟ್ ನ ಶೀರ್ಷಿಕೆ ಕೂಡ ಹಾಗೆಯೇ ಇದೆ. ವೃತ್ತಿಯಲ್ಲಿ ಫಿಟ್ನೆಸ್ ಟ್ರೈನರ್ ಆಗಿರುವ ನೂಪುರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...