iQOO ಈಗ iQOO ನಿಯೋ 6 ಸೀರೀಸ್ ಮೊಬೈಲನ್ನು ಭಾರತೀಯ ಮಾರುಕಟ್ಟೆಗೆ ತರಲು ಯೋಜಿಸುತ್ತಿದೆ. ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ಖಚಿತಪಡಿಸಿಲ್ಲ.
ಆದರೆ, ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಭಾರತದಲ್ಲಿ ನಿಯೋ 6ರ ಬಿಡುಗಡೆ ಟೈಮ್‌ಲೈನ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಬೆಲೆಯನ್ನು ಸಹ ಬಹಿರಂಗಪಡಿಸಿದ್ದಾರೆ.
iQOO ನಿಯೋ 6 ಸುಮಾರು ರೂ. 30,000 ಬೆಲೆ ಇರಲಿದೆ. ಆದರೆ ಟಿಪ್‌ಸ್ಟರ್ ಪ್ರಕಾರ, 8ಜಿಬಿ ರ್ಯಾಮ್ ಹೊಂದಿರುವ ಫೋನ್‌ನ ಬೇಸಿಕ್‌ಗೆ ರೂ. 29,000 ಮತ್ತು 12ಜಿಬಿ ಮಾದರಿಯು ರೂ. 31,000ಗೆ ಲಭ್ಯವಾಗಬಹುದು. ಈ ಸ್ಮಾರ್ಟ್‌ಫೋನ್ ಡಾರ್ಕ್ ನೋವಾ ಮತ್ತು ಇಂಟರ್ ಸ್ಟೆಲ್ಲರ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ.
ಕೋವಿಡ್ ಸೋಂಕಿತರನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ ಶ್ವಾನ
ನಿಯೋ 6 ಸ್ಮಾರ್ಟ್‌ಫೋನ್ 6.62-ಇಂಚಿನ E4 AMOLED ಡಿಸ್‌ಪ್ಲೇಯನ್ನು 120Hz ರಿಫ್ರೆಶ್ ರೇಟ್ ಮತ್ತು 1300 nits ಬ್ರೈಟ್‌ನೆಸ್‌ನೊಂದಿಗೆ ಹೊಂದಿರುತ್ತದೆ.
ಚೈನಾದಲ್ಲಿ ಬಿಡುಗಡೆಯಾದ ಆವೃತ್ತಿಯಂತೆಯೇ ಭಾರತೀಯ ಆವೃತ್ತಿಯ ಪರದೆಯು ಪೂರ್ಣ-HD+ (2400 x 1800 ಪಿಕ್ಸೆಲ್‌ಗಳು) ರೆಸಲ್ಯೂಶನ್‌ನಿಂದ ಕೂಡಿರಬಹುದು.
ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ, 64MP ಮುಖ್ಯ ಲೆನ್ಸ್, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಕೊನೆಯದಾಗಿ 2MP ಯೂನಿಟ್ ಒಳಗೊಂಡಿರುತ್ತದೆ.
ಮುಂಭಾಗದಲ್ಲಿ, ಇದು ಸೆಲ್ಫಿಗಳನ್ನು ತೆಗೆದುಕೊಳ್ಳಲು ಮತ್ತು ವಿಡಿಯೊ ಕರೆಗಳನ್ನು ಮಾಡಲು 16MP ಕ್ಯಾಮೆರಾವನ್ನು ಹೊಂದಿದೆ. ಇದು 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರಲಿದ್ದು, 4,700mAh ಬ್ಯಾಟರಿಯನ್ನು ಹೊಂದಿದೆ.