alex Certify ಭಯಾನಕ ಅಲೆಗಳ ನಡುವೆಯೂ ಸೆಲ್ಫಿ ಕ್ಲಿಕ್ಕಿಸಿದವರಿಗೆ ಐಪಿಎಸ್​ ಅಧಿಕಾರಿ ಕಿವಿಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಯಾನಕ ಅಲೆಗಳ ನಡುವೆಯೂ ಸೆಲ್ಫಿ ಕ್ಲಿಕ್ಕಿಸಿದವರಿಗೆ ಐಪಿಎಸ್​ ಅಧಿಕಾರಿ ಕಿವಿಮಾತು

ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್​ಗಳನ್ನು ಪಡೆಯಬೇಕು ಎಂಬ ಹುಚ್ಚು, ಜೀವದ ಜೊತೆ ಚೆಲ್ಲಾಟವಾಡುವಂತೆಯೂ ಮಾಡಿ ಬಿಡುತ್ತದೆ. ತಮ್ಮ ಮೋಜು ಮಸ್ತಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲು ಹೋಗಿ ಎಷ್ಟೋ ಜನರು ಸಾವನ್ನಪ್ಪಿದ ಉದಾಹರಣೆ ಕೂಡ ಇದೆ. ಇಂತದ್ದೇ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿದೆ.

ಟ್ವಿಟರ್​ನಲ್ಲಿ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಶೇರ್​ ಮಾಡಿರುವ ವಿಡಿಯೋದಲ್ಲಿ ಅಲೆಯು ಭಯಾನಕವಾಗಿ ತೀರಕ್ಕೆ ಬಂದು ಅಪ್ಪಳಿಸುತ್ತಿದ್ದರೂ ಸಹ ಕೆಲವೊಂದಿಷ್ಟು ಜನರು ಅಪಾಯಕಾರಿ ಅಲೆಗಳ ಬಳಿಯೇ ನಿಂತಿರುವುದನ್ನು ಕಾಣಬಹುದಾಗಿದೆ, ಹಲವರು ಈ ಭಯಾನಕ ಅಲೆಗಳ ಜೊತೆ ಸೆಲ್ಫಿ ತೆಗೆದುಕೊಳ್ತಿದ್ದರೆ ಇನ್ನೂ ಕೆಲವರು ವಿಡಿಯೋ ಮಾಡ್ತಿದ್ದಾರೆ, ಈ ಘಟನೆಯು ಎಲ್ಲಿ ನಡೆದಿದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ.

ಈ ವಿಡಿಯೋ ಶೇರ್​ ಮಾಡಿರುವ ಐಪಿಎಸ್​ ಅಧಿಕಾರಿ ದೀಪಾಂಶು ಕಾಬ್ರಾ ಸೋಶಿಯಲ್​ ಮೀಡಿಯಾದ ಲೈಕ್​ಗಳಿಗಿಂತ ನಿಮ್ಮ ಜೀವ ಹೆಚ್ಚು ಮುಖ್ಯ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ 28 ಸಾವಿರಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ, ಪ್ರವಾಸಿಗರ ವರ್ತನೆಗೆ ನೆಟ್ಟಿಗರು ಕೂಡ ಆಕ್ರೋಶ ಹೊರ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...