alex Certify ಐಪಿಎಲ್​ 15ನೇ ಆವೃತ್ತಿಗೆ ಆರ್.​ಸಿ.ಬಿ. ಮುಖ್ಯ ಕೋಚ್​ ಆಗಿ ಸಂಜಯ್​ ಬಂಗಾರ್​ ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​ 15ನೇ ಆವೃತ್ತಿಗೆ ಆರ್.​ಸಿ.ಬಿ. ಮುಖ್ಯ ಕೋಚ್​ ಆಗಿ ಸಂಜಯ್​ ಬಂಗಾರ್​ ಆಯ್ಕೆ

ಇಂಡಿಯನ್​ ಪ್ರೀಮಿಯರ್​ ಲೀಗ್​​ನ 15ನೇ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಖ್ಯ ಕೋಚ್​ ಆಗಿ ಸಂಜಯ್​ ಬಂಗಾರ್​ ಅಧಿಕೃತವಾಗಿ ನೇಮಕಗೊಂಡಿದ್ದಾರೆ.

ಸಂಜಯ್​ ಬಂಗಾರ್​​ ಈ ಮೂಲಕ ಮೈಕ್​ ಹೆಸ್ಸನ್​ರಿಂದ ಅಧಿಕಾರವನ್ನು ಹಸ್ತಾಂತರಿಸಿಕೊಳ್ಳಲಿದ್ದಾರೆ. ಸಂಜಯ್​ ಬಂಗಾರ್​​ರನ್ನು ತಂಡದ ಮುಖ್ಯ ಕೋಚ್​ ಎಂದು ಘೋಷಣೆ ಮಾಡಿದ ಬಳಿಕ ಮಾತನಾಡಿದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಚೇರ್​ಮ್ಯಾನ್​, ಪ್ರಥಮೇಶ್​ ಮಿಶ್ರಾ, ಆರ್​ಸಿಬಿ ತಂಡದಲ್ಲಿರುವ ಆಟಗಾರರ ಪ್ರತಿಭೆಯನ್ನು ಬೆಂಬಲಿಸುವ ಹಾಗೂ ಅದನ್ನು ಇನ್ನಷ್ಟು ಸುಧಾರಿಸುವ ತತ್ವಕ್ಕೆ ಬದ್ಧವಾಗಿದೆ. ಇದೇ ನಂಬಿಕೆಯ ಮೇಲೆ ಸಂಜಯ್​ ಬಂಗಾರ್​​ರನ್ನು ಮುಖ್ಯ ಕೋಚ್​ ಆಗಿ ನೇಮಿಸಿದ್ದೇವೆ ಎಂದು ಹೇಳಿದ್ದಾರೆ.

ಸಂಜಯ್​ ಬಂಗಾರ್ ಆರ್​ಸಿಬಿಯ​ ಬ್ಯಾಟಿಂಗ್​ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್​ ತಂಡದ ಜೊತೆಯೂ ಕೆಲಸ ಮಾಡಿರುವ ಅನುಭವ ಹೊಂದಿರುವ ಇವರು ನಮ್ಮ ತಂಡಕ್ಕೆ ಅನುಭವದ ಖಜಾನೆಯನ್ನೇ ಹೊತ್ತು ತರುತ್ತಿದ್ದಾರೆ ಎಂದು ಹೇಳಿದ್ರು.

ಆರ್​ಸಿಬಿ ತಂಡದಲ್ಲಿ ತಮ್ಮ ಹೊಸ ಜವಾಬ್ದಾರಿಯ ವಿಚಾರವಾಗಿ ಮಾತನಾಡಿದ ಸಂಜಯ್​ ಬಂಗಾರ್​, ಐಪಿಎಲ್​ನ ಶ್ರೇಷ್ಟ ಫ್ರಾಂಚೈಸಿಗೆ ಮುಖ್ಯ ಕೋಚ್​ ಆಗಿ ನೇಮಕಗೊಂಡಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ಈ ತಂಡದ ಕೆಲ ಪ್ರತಿಭಾನ್ವಿತ ಆಟಗಾರರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಈ ತಂಡವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಲು ನಾನು ಕಾತುರನಾಗಿದ್ದೇನೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...