alex Certify ಮುಂದಿನ ವರ್ಷ IPL ನಲ್ಲಿ ಹರಿಯಲಿದೆ ಹಣದ ಹೊಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ವರ್ಷ IPL ನಲ್ಲಿ ಹರಿಯಲಿದೆ ಹಣದ ಹೊಳೆ

IPL 2022: Rs 2000 Crore Base Price Set By BCCI For Auction Of Two New Teams,  Board Income Will Increase | There Will Be Bumper Earnings From IPL Next  Year, New Teams

ಐಪಿಎಲ್ 2022 ರ ಸೀಸನ್ ಮೊದಲಿಗಿಂತ ಹೆಚ್ಚು ಧಮಾಕಾ ಮಾಡಲಿದೆ. ಮುಂದಿನ ವರ್ಷ 2 ಹೊಸ ತಂಡಗಳು, ಲೀಗ್‌ಗೆ ಪ್ರವೇಶ ಮಾಡಲಿವೆ. ಬಿಸಿಸಿಐ ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಐಪಿಎಲ್ 2022 ಕ್ಕಿಂತ ಮೊದಲು, ಬಿಸಿಸಿಐ ಎರಡೂ ಹೊಸ ತಂಡಗಳಿಗೆ 2000 ಕೋಟಿ ಮೂಲ ಬೆಲೆಯನ್ನು ಇಟ್ಟುಕೊಂಡಿದೆ. ಬಿಡ್ಡಿಂಗ್ ಯುದ್ಧದ ಅಂತ್ಯದ ವೇಳೆಗೆ, ಈ ಬೆಲೆ 5000 ಕೋಟಿಗಳನ್ನು ತಲುಪುತ್ತದೆ ಎಂದು ಬೋರ್ಡ್ ನಿರೀಕ್ಷಿಸುತ್ತಿದೆ. ಮೊದಲು ಹೊಸ ತಂಡಗಳ ಮೂಲ ಬೆಲೆಯನ್ನು 1700 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿತ್ತು. ನಂತ್ರ ಇದನ್ನು ಹೆಚ್ಚಿಸಲಾಗಿದೆ. ಈಗ 2000 ಕೋಟಿಗೆ ನಿಗಧಿಪಡಿಸಲಾಗಿದೆ.

ಹೊಸ ತಂಡದ ಆಗಮನದೊಂದಿಗೆ ಪಂದ್ಯಗಳ ಸಂಖ್ಯೆ ಹೆಚ್ಚಾಗುತ್ತದೆ. ಮುಂದಿನ ಋತುವಿನಲ್ಲಿ ಐಪಿಎಲ್ 74 ಪಂದ್ಯ ನಡೆಯಲಿದೆ. ಐಪಿಎಲ್ 14ನೇ ಋತು ಕೊರೊನಾ ಹಿನ್ನಲೆಯಲ್ಲಿ ಅರ್ಧಕ್ಕೆ ನಿಂತಿತ್ತು. ಸೆಪ್ಟೆಂಬರ್ ನಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಇದಕ್ಕೆ ಯುಎಇನಲ್ಲಿ ಎಲ್ಲ ಸಿದ್ಧತೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...