alex Certify ಐಪಿಲ್‌ 2022: ಈ ವೇಳೆ ನಡೆಯಲಿದೆ ಆಟಗಾರರ ಹರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಲ್‌ 2022: ಈ ವೇಳೆ ನಡೆಯಲಿದೆ ಆಟಗಾರರ ಹರಾಜು

ಐಪಿಎಲ್‌ 2022ಗೆ ಆಟಗಾರರನ್ನು ಖರೀದಿ ಮಾಡಲು ತಂಡಗಳು ತಮ್ಮೆಲ್ಲಾ ಯೋಜನೆಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಇದಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ.

“ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಆದರೆ ಹರಾಜನ್ನು ಫೆಬ್ರವರಿ 11-13ರ ನಡುವೆ ಹಮ್ಮಿಕೊಳ್ಳಲಾಗುವುದು” ಎಂದು ಮೂಲವೊಂದು ತಿಳಿಸಿದೆ.

ಚರ್ಮದ ಆರೋಗ್ಯಕ್ಕೆ ರಾಮಬಾಣ ಈ ಐದು ಸೊಪ್ಪುಗಳು

ಇದೇ ವೇಳೆ, ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ಮುಂಬರುವ ಐಪಿಎಲ್‌ನಲ್ಲಿ ಅಹಮದಾಬಾದ್ ಫ್ರಾಂಚೈಸಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಐಪಿಎಲ್‌ನ ಎಂಟು ತಂಡಗಳು ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಿವೆ. ಮುಂಬಯಿ ಇಂಡಿಯನ್ಸ್‌ನಿಂದ ಕಳೆದ ವರ್ಷ ಬಿಡುಗಡೆಯಾದ ಹಾರ್ದಿಕ್, ಮುಂಬರುವ ಟೂರ್ನಿಯಲ್ಲಿ ಅಹಮದಾಬಾದ್‌ನಲ್ಲಿ ಆಡುವ ಸಾಧ್ಯತೆ ಇದೆ.

ಐಪಿಎಲ್‌ನ ಹೊಸ ತಂಡಗಳಾದ ಅಹಮದಾಬಾದ್ ಮತ್ತು ಲಖನೌ ತಲಾ 33 ಕೋಟಿ ರೂಪಾಯಿಗಳನ್ನು ಆಟಗಾರರ ಖರೀದಿಗೆಂದು ಹರಾಜಿನಲ್ಲಿ ವಿನಿಯೋಗಿಸಬಹುದು.

ಇದೇ ವೇಳೆ, ಭಾರತದಲ್ಲಿ ಕೋವಿಡ್ ಕಾಟದ ಕಾರಣದಿಂದಾಗಿ 2022ರ ಐಪಿಎಲ್‌ ಅನ್ನೂ ಸಹ ವಿದೇಶದಲ್ಲಿ ಆಯೋಜಿಸುವ ಆಯ್ಕೆಗೆ ಬಿಸಿಸಿಐ ಮುಕ್ತವಾಗಿದೆ. ರಣಜಿ ಟ್ರೋಫಿ ಸೇರಿದಂತೆ ದೇಶೀ ಕ್ರಿಕೆಟ್‌ನ ಎಲ್ಲಾ ಮಾದರಿಗಳನ್ನು ಕೋವಿಡ್ ಕಾರಣದಿಂದಾಗಿ ಬಿಸಿಸಿಐ ಮುಂದೂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...